Uber Eats ಆ್ಯಪ್ ಬೆಂಬಲವನ್ನು ಸಂಪರ್ಕಿಸದೆಯೇ ಆರ್ಡರ್ಗಳನ್ನು ರದ್ದುಗೊಳಿಸಲು ನಿಮಗೆ ಅನುಮತಿ ನೀಡುತ್ತದೆ. ಆದಾಗ್ಯೂ, ನೀವು ಆರ್ಡರ್ ಅನ್ನು ಯಾವಾಗ ರದ್ದುಗೊಳಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಶುಲ್ಕವಿರಬಹುದು.
ಆ್ಯಪ್ ಮೂಲಕ ನೇರವಾಗಿ ಆರ್ಡರ್ ಅನ್ನು ರದ್ದುಗೊಳಿಸಲು:
- ನಿಮ್ಮ ಲೈವ್ ಆರ್ಡರ್ ಸ್ಟೇಟಸ್ ಸ್ಕ್ರೀನ್ ಅನ್ನು ಪ್ರವೇಶಿಸಿ, ನಂತರ "ಆರ್ಡರ್ ರದ್ದು" ಅನ್ನು ಟ್ಯಾಪ್ ಮಾಡಿ.
- ನೀವು ರದ್ದುಗೊಳಿಸಲು ಬಯಸುತ್ತೀರಿ ಎಂದು ದೃಢೀಕರಿಸುವ ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ ಮತ್ತು ಯಾವುದೇ ಸಂಭಾವ್ಯ ಶುಲ್ಕಗಳ ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತದೆ.
- "ಆರ್ಡರ್ ರದ್ದುಮಾಡಿ" ಟ್ಯಾಪ್ ಮಾಡಿ.
- ನೀವು ಏಕೆ ರದ್ದುಮಾಡಲು ಆಯ್ಕೆಮಾಡಿದಿರಿ ಎನ್ನುವುದನ್ನು ಆರಿಸಿ, ನಂತರ "ಮುಗಿದಿದೆ" ಟ್ಯಾಪ್ ಮಾಡಿ.
ಆರ್ಡರ್ ಮೇಲಿನ ಶುಲ್ಕಗಳನ್ನು ಪರಿಶೀಲಿಸಲು:
- ಕೆಳಗಿನ ಮೆನು ಬಾರ್ನಿಂದ, ಆರ್ಡರ್ ಪುಟವನ್ನು ವೀಕ್ಷಿಸಲು ರಸೀತಿ ಐಕಾನ್ ಟ್ಯಾಪ್ ಮಾಡಿ.
- ರದ್ದುಗೊಳಿಸಿದ ಆರ್ಡರ್ ಅನ್ನು ನೀವು ಕಂಡುಕೊಳ್ಳುವವರೆಗೆ ಸ್ಕ್ರಾಲ್ ಮಾಡಿ.
- “ರಸೀತಿಯನ್ನು ವೀಕ್ಷಿಸಿ” ಟ್ಯಾಪ್ ಮಾಡಿ.