ನೀವು Uber ಪ್ಲಾಟ್ಫಾರ್ಮ್ ಅನ್ನು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ, ನಿಮ್ಮ ಡೇಟಾ ಡೌನ್ಲೋಡ್ನ ವಿಷಯಗಳು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:
ನಿಮ್ಮ ಖಾತೆಯ ಡೇಟಾ ಈ ಕೆಳಗಿನಂತಹ ಮಾಹಿತಿಗಳನ್ನು ಒಳಗೊಂಡಿರುತ್ತದೆ:
ನಿಮ್ಮ ಸವಾರರ ಡೇಟಾ ನೀವು ತಲುಪಬೇಕಾದ ಸ್ಥಳಕ್ಕೆ ನಿಮ್ಮನ್ನು ತಲುಪಿಸಲು ಬಳಸುವ ಮಾಹಿತಿಯನ್ನು ಒಳಗೊಂಡಿದೆ, ಉದಾಹರಣೆಗೆ:
ನಿಮ್ಮ Uber Eats ಮಾಹಿತಿಯು ಈ ಕೆಳಗಿನಂತಹ ಆರ್ಡರ್ ಇತಿಹಾಸದ ವಿವರಗಳನ್ನು ಒಳಗೊಂಡಿರುತ್ತದೆ:
ನಿಮ್ಮ ಮಾಹಿತಿ ಡೌನ್ಲೋಡ್ನಲ್ಲಿ ಕೆಲವು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿಲ್ಲ. ಇದು ಭದ್ರತೆ ಕಾರಣಗಳಿಗಾಗಿರಬಹುದು ಅಥವಾ ಮಾಹಿತಿಯು ಸ್ವಾಮ್ಯದ್ದಾಗಿರುವುದರಿಂದ ಆಗಿರಬಹುದು. ನಾವು ಸಕಾರಣವಾಗಿಯೇ ಹೊರಗಿಡಲು ಸಾಧ್ಯವಿಲ್ಲದ ಮತ್ತೊಬ್ಬ ಪಕ್ಷದ ವೈಯಕ್ತಿಕ ಡೇಟಾವನ್ನು ಒಳಗೊಂಡಿರುವ ಮಾಹಿತಿಯನ್ನು ಕೂಡಾ ನಾವು ಸೇರಿಸುವುದಿಲ್ಲ; ಉದಾಹರಣೆಗೆ, ಸಹಾಯ ಸೇವೆಗಳ ಟಿಕೆಟ್ಗಳಲ್ಲಿನ ವಿಷಯ, Uber ನೊಂದಿಗಿನ ಇಮೇಲ್ ವಿನಿಮಯಗಳು ಅಥವಾ ನೀವು ಸ್ವೀಕರಿಸಿದ ಸಂದೇಶಗಳನ್ನು ನಾವು ಸೇರಿಸುವುದಿಲ್ಲ.
ಪ್ರತಿ ಖಾತೆ ಪ್ರಕಾರಕ್ಕೆ ಡೌನ್ಲೋಡ್ನಲ್ಲಿ ಸೇರಿಸಲಾಗಿಲ್ಲದ ಮಾಹಿತಿಯ ವಿಧದ ಪಟ್ಟಿ ಕೆಳಗಿದೆ. ಜೊತೆಗೆ ಅದನ್ನು ಏಕೆ ಸೇರಿಸಲಾಗಿಲ್ಲ ಎಂಬುದಕ್ಕೆ ಕಾರಣವನ್ನು ಸಹ ನೀಡಲಾಗಿದೆ.
ಸಾಮಾಜಿಕ ಭದ್ರತೆ ಸಂಖ್ಯೆ, ಮೈಲಿಂಗ್ ವಿಳಾಸ, ಮತ್ತು ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳಂತಹ ನೀವು ನಮಗೆ ಒದಗಿಸಿರುವ ತೀರಾ ವೈಯಕ್ತಿಕವಾದ ಡೇಟಾವನ್ನು ನಿಮ್ಮ ಡೌನ್ಲೋಡ್ನಲ್ಲಿ ಸೇರಿಸಲಾಗಿರುವುದಿಲ್ಲ. ನಿಮ್ಮ ವೈಯಕ್ತಿಕ ಸುರಕ್ಷತೆಗಾಗಿ ನಾವು ಈ ಡೇಟಾವನ್ನು ಹೊರಗಿಡುತ್ತೇವೆ. ನೀವು ಕಳುಹಿಸಿದ ಸಂದೇಶಗಳನ್ನು ಮಾತ್ರವೇ ನೀವು ಸ್ವೀಕರಿಸುತ್ತೀರಿ. ಸುರಕ್ಷತಾ ಕಾರಣಗಳಿಗಾಗಿ, ನೀವು ಸ್ವೀಕರಿಸಿದ ಸಂದೇಶಗಳನ್ನು ಸೇರಿಸಲಾಗಿಲ್ಲ.
ನಿಮ್ಮ ರಫ್ತಿನಲ್ಲಿ ಒಳಗೊಂಡಿರುವ ಮೊಬೈಲ್ ಈವೆಂಟ್ ಡೇಟಾ - ಸಾಧನ OS, ಸಾಧನ ಮಾಡೆಲ್, ಸಾಧನ ಭಾಷೆ ಮತ್ತು ಆ್ಯಪ್ ಆವೃತ್ತಿ - ಇವು ನಿಮ್ಮ ಡೌನ್ಲೋಡ್ನ ಗಾತ್ರವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಡೇಟಾವನ್ನು ಸಾಧ್ಯವಾದಷ್ಟು ಬೇಗ ಒದಗಿಸುವುದಕ್ಕೆ ನಮಗೆ ಅನುಮತಿಸಲು ಕಳೆದ 30 ದಿನಗಳಿಗೆ ಸೀಮಿತವಾಗಿರುತ್ತದೆ.
ನಿಮ್ಮ ಡೌನ್ಲೋಡ್ ನಿಮ್ಮ ಚಾಲಕರ ಅನುಭವದ ಬಗ್ಗೆ ಬಹಳ ಸೀಮಿತ ಮಾಹಿತಿಯನ್ನು ಹೊಂದಿರಬಹುದು. ನಿಮ್ಮ ಚಾಲಕ ಡೇಟಾದ ಕುರಿತಾದ ಹೆಚ್ಚಿನ ವಿಷಯ ಮತ್ತು ಮಾಹಿತಿಯನ್ನು ಚಾಲಕ ಡ್ಯಾಶ್ಬೋರ್ಡ್ನಲ್ಲಿ ಕಾಣಬಹುದು.
ನೀವು ಹೇಗೆ Uber ಪ್ಲಾಟ್ಫಾರಂ ಬಳಸುತ್ತೀರಿ ಎಂಬ ಕುರಿತಾದ ಹೆಚ್ಚು ಸಂಬಂಧಿತ ಡೇಟಾವನ್ನು ನಿಮ್ಮ ಡೇಟಾ ಡೌನ್ಲೋಡ್ ಒಳಗೊಂಡಿರುತ್ತದೆ. ನಿಮ್ಮ ವೈಯಕ್ತಿಕ ಡೇಟಾ ಕುರಿತು ನಿಮಗೆ ಪ್ರಶ್ನೆಗಳೇನಾದರೂ ಇದ್ದರೆ, ನಿಮ್ಮ ಡೌನ್ಲೋಡ್ನಲ್ಲಿ ಲಭ್ಯವಿಲ್ಲದ ನಿರ್ದಿಷ್ಟ ಡೇಟಾವನ್ನು ಸ್ವೀಕರಿಸಲು ಬಯಸಿದರೆ, ನಿಮ್ಮ ಡೇಟಾದ ತಿದ್ದುಪಡಿಗೆ ವಿನಂತಿಸಲು ಬಯಸಿದರೆ ಅಥವಾ Uber ಡೇಟಾ ರಕ್ಷಣೆ ಅಧಿಕಾರಿ (DPO) ಅನ್ನು ಸಂಪರ್ಕಿಸಲು ಬಯಸಿದರೆ, ಈ ಕೆಳಗಿನ ಲಿಂಕ್ ಮೂಲಕ ನೀವು ವಿನಂತಿ ಸಲ್ಲಿಸಬಹುದು.