ಪಿಕ್-ಅಪ್ ಆರ್ಡರ್ ಆಗಾಗ ಕೇಳಲ್ಪಡುವ ಪ್ರಶ್ನೆಗಳು

ಪಿಕ್-ಅಪ್ ಆರ್ಡರ್ ಎಂದರೇನು?

ಪಿಕ್-ಅಪ್ ಆರ್ಡರ್ ಎಂದರೆ ನೀವು ಆ್ಯಪ್ ಮೂಲಕ ಆರ್ಡರ್ ಮಾಡಿ ನಂತರ ಅದನ್ನು ಸಂಗ್ರಹಿಸಲು ನೀವು ವ್ಯಾಪಾರಿಯ ಬಳಿಗೆ ಹೋಗುವುದು. ನೀವು ವಿವಿಧ ಆರ್ಡರ್ ಹಂತಗಳನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ನೀವು ಸಂಗ್ರಹಿಸಲು ಆರ್ಡರ್ ಯಾವಾಗ ಸಿದ್ಧವಾಗಿದೆ ಎಂಬುದನ್ನು ನಿಖರವಾಗಿ ತಿಳಿಯಬಹುದು.

ಪಿಕ್-ಅಪ್ ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದೆ.

ಡೈನ್-ಇನ್ ಆರ್ಡರ್ ಎಂದರೇನು?

ಡೈನ್-ಇನ್-ಆರ್ಡರ್ ಎಂದರೆ ನೀವು ಆ್ಯಪ್ ಮೂಲಕ ಆರ್ಡರ್ ಮಾಡಿ ನಂತರ ಅದನ್ನು ಸಂಗ್ರಹಿಸಲು ನೀವು ವ್ಯಾಪಾರಿಯ ಬಳಿಗೆ ಹೋಗುವುದು. ನಂತರ ನೀವು ಡೈನ್ ಇನ್ ಮಾಡಲು ಆಯ್ಕೆ ಮಾಡಬಹುದು.

ಡೈನ್-ಇನ್ ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದೆ.

ನಾನು ವ್ಯಾಪಾರಿಯನ್ನು ಹುಡುಕಲು ಸಾಧ್ಯವಾಗದಿದ್ದರೆ ಏನು ಮಾಡಬೇಕು?

ನೀವು ಆರ್ಡರ್ ಮಾಡಿದ ವ್ಯಾಪಾರಿಯನ್ನು ಪತ್ತೆ ಮಾಡುವಲ್ಲಿ ನಿಮಗೆ ಸಮಸ್ಯೆಗಳಿದ್ದರೆ, ಹೆಚ್ಚಿನ ಸಹಾಯಕ್ಕಾಗಿ ನೇರವಾಗಿ ಅವರನ್ನು ಸಂಪರ್ಕಿಸಿ.

ನಾನು ಪಿಕಪ್ ಅನ್ನು ಹೇಗೆ ಆರ್ಡರ್ ಮಾಡುವುದು?

  1. ಆ್ಯಪ್‌ ತೆರೆಯಿರಿ.
  2. ಡೈನಿಂಗ್ ಮೋಡ್ ಆಗಿ "ಪಿಕ್-ಅಪ್" ಆಯ್ಕೆಮಾಡಿ
  3. "ASAP" ಅಥವಾ "Scheduled" ಆರ್ಡರ್ ಆಯ್ಕೆಮಾಡಿ. ಪಿಕ್-ಅಪ್ ಆಯ್ಕೆಯೊಂದಿಗೆ ವ್ಯಾಪಾರಿಗಳ ಸಿದ್ಧತೆ ಸಮಯ, ದೂರ, ಬೆಲೆ ಮತ್ತು ರೇಟಿಂಗ್ ಅನ್ನು ನಿಮಗೆ ನಂತರ ತೋರಿಸಲಾಗುತ್ತದೆ.
  4. ಒಮ್ಮೆ ನೀವು ಪಿಕ್-ಅಪ್ ಆರ್ಡರ್ ಮಾಡಿದ ನಂತರ, ವ್ಯಾಪಾರಿಯು ಆರ್ಡರ್ ಸ್ವೀಕರಿಸಿದಾಗ, ಆರ್ಡರ್ ಸಿದ್ಧಗೊಳ್ಳುವ ಅಂದಾಜು ಸಮಯ ಮತ್ತು ಆರ್ಡರ್ ಸಂಗ್ರಹಣೆಗೆ ಸಿದ್ಧವಾದಾಗ ನಿಮಗೆ ಸೂಚಿಸಲಾಗುತ್ತದೆ.

ನಾನು ಡೈನ್-ಇನ್ ಅನ್ನು ಹೇಗೆ ಆರ್ಡರ್ ಮಾಡುವುದು?

  1. ಆ್ಯಪ್‌ ತೆರೆಯಿರಿ.
  2. ಡೈನಿಂಗ್ ಮೋಡ್ ಆಗಿ "ಡೈನ್-ಇನ್" ಆಯ್ಕೆ ಮಾಡಿ
  3. "ASAP" ಅಥವಾ "Scheduled" ಆರ್ಡರ್ ಆಯ್ಕೆಮಾಡಿ. ಡೈನ್-ಇನ್ ಆಯ್ಕೆಯೊಂದಿಗೆ ವ್ಯಾಪಾರಿಗಳ ಸಿದ್ಧತೆ ಸಮಯ, ದೂರ, ಬೆಲೆ ಮತ್ತು ರೇಟಿಂಗ್ ಅನ್ನು ನಿಮಗೆ ನಂತರ ತೋರಿಸಲಾಗುತ್ತದೆ.
  4. ಒಮ್ಮೆ ನೀವು ಡೈನ್-ಇನ್ ಆರ್ಡರ್ ಮಾಡಿದ ನಂತರ, ವ್ಯಾಪಾರಿಯು ಆರ್ಡರ್ ಅನ್ನು ಸ್ವೀಕರಿಸಿದಾಗ ಮತ್ತು ಆರ್ಡರ್ ಸಿದ್ಧವಾಗುವವರೆಗಿನ ಅಂದಾಜು ಸಮಯವನ್ನು ನಿಮಗೆ ತಿಳಿಸಲಾಗುತ್ತದೆ.

ನನ್ನ ಆರ್ಡರ್ ಸಂಖ್ಯೆ ಎಲ್ಲಿದೆ?

ಆರ್ಡರ್ ಗುರುತಿನ ಸಂಖ್ಯೆಯು ಟ್ರ್ಯಾಕಿಂಗ್ ಪರದೆಯ ಮೇಲ್ಭಾಗದಲ್ಲಿ ನಿಮ್ಮ ಮೊದಲ ಹೆಸರು ಮತ್ತು ಕೊನೆಯ ಮೊದಲಕ್ಷರಗಳ ಕೆಳಗೆ ಹಾಗೂ ರಸೀತಿಯಲ್ಲಿದೆ.

ನೀವು ಸರಿಯಾದ ಆರ್ಡರ್ ಅನ್ನು ತೆಗೆದುಕೊಳ್ಳುತ್ತಿರುವಿರಿ ಎಂಬುದನ್ನು ಪರಿಶೀಲಿಸಲು ನಿಮಗೆ ಸಹಾಯ ಮಾಡಲು ಪ್ರತಿ ಆರ್ಡರ್ ಒಂದು ಆರ್ಡರ್ ಗುರುತಿನ ಸಂಖ್ಯೆಯನ್ನು ಹೊಂದಿರುತ್ತದೆ.

ನೀವು ಆರ್ಡರ್ ಅನ್ನು ತೆಗೆದುಕೊಂಡಾಗ, ವ್ಯಾಪಾರಿಯೊಂದಿಗೆ ನಿಮ್ಮ ಆರ್ಡರ್ ಗುರುತಿನ ಸಂಖ್ಯೆಯನ್ನು ಪರಿಶೀಲಿಸಿ.

ನನ್ನ ಪಿಕ್-ಅಪ್ ಅಥವಾ ಡೈನ್-ಇನ್ ಆರ್ಡರ್ ಅನ್ನು ಯಾವಾಗ ಸಂಗ್ರಹಿಸಬೇಕು ಎಂದು ನನಗೆ ಹೇಗೆ ತಿಳಿಯುತ್ತದೆ?

ಆರ್ಡರ್ ಸಿದ್ಧವಾದಾಗ ಆ್ಯಪ್ ನಿಮಗೆ ತಿಳಿಸುತ್ತದೆ.