ನಿಮ್ಮ ಆರ್ಡರ್ನಲ್ಲಿನ ಡೆಲಿವರಿ ವಿಳಾಸವು ತಪ್ಪಾಗಿದ್ದಲ್ಲಿ, ಅವರಿಗೆ ತಿಳಿಸಲು ನಿಮ್ಮ ಡೆಲಿವರಿ ವ್ಯಕ್ತಿಯನ್ನು ನೇರವಾಗಿ ಸಂಪರ್ಕಿಸಿ.
ನಿಮ್ಮ ಡೆಲಿವರಿ ವ್ಯಕ್ತಿಯು ಸರಿಯಾದ ವಿಳಾಸಕ್ಕೆ ಆರ್ಡರ್ ಅನ್ನು ತಲುಪಿಸಬೇಕೆ ಎಂದು ನಿರ್ಧರಿಸಬಹುದು. ನಿಮ್ಮ ಹೆಚ್ಚುವರಿ ಪ್ರಯಾಣದ ದೂರಕ್ಕಾಗಿ ಅವರಿಗೆ ಪಾವತಿಸಲಾಗುತ್ತದೆ.
ಡೆಲಿವರಿ ವಿಳಾಸವನ್ನು ಹೇಗೆ ಬದಲಾಯಿಸುವುದು
- ನಿಮ್ಮ ಆರ್ಡರ್ ಅನ್ನು ಡೆಲಿವರಿ ವ್ಯಕ್ತಿಗೆ ನಿಯೋಜಿಸಿದ ತಕ್ಷಣ, ಅವರನ್ನು ಸಂಪರ್ಕಿಸಲು ನಿಮ್ಮ Uber Eats ಆ್ಯಪ್ ಬಳಸಿ.
- ಆರ್ಡರ್ ಟ್ರ್ಯಾಕಿಂಗ್ ಪರದೆಯ ನಕ್ಷೆಯಲ್ಲಿ "ಸಂಪರ್ಕ" ಟ್ಯಾಪ್ ಮಾಡಿ.
- ಅವರನ್ನು ಸಂಪರ್ಕಿಸಲು ಕರೆ ಅಥವಾ ಸಂದೇಶದ ನಡುವೆ ಯಾವುದು ಬೇಕೋ ಅದನ್ನು ಆಯ್ಕೆಮಾಡಿ.
- ಡೆಲಿವರಿ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಲ್ಲಿ, ಅವರಿಗೆ ಸ್ಪಷ್ಟ ಸೂಚನೆಗಳನ್ನು ನೀಡಲು ಮರೆಯದಿರಿ.
- ಹೆಚ್ಚಿನ ಡೆಲಿವರಿ ವಿಳಂಬಗಳನ್ನು ತಪ್ಪಿಸಲು ನಿಮ್ಮ ಫೋನ್ ಅನ್ನು ಹತ್ತಿರದಲ್ಲಿರಿಸಿಕೊಳ್ಳಿ ಮತ್ತು ಧ್ವನಿಯನ್ನು ಆನ್ ಮಾಡಿ.
ನಿಮ್ಮ ಆರ್ಡರ್ ರದ್ದುಗೊಂಡಿದ್ದಲ್ಲಿ ಮತ್ತು ನಿಮಗೆ ಸಹಾಯ ಬೇಕಾದಲ್ಲಿ, ದಯವಿಟ್ಟು , ಆ್ಯಪ್ನ ಮುಖಪುಟ ಪರದೆಗೆ ಹಿಂತಿರುಗಿ, ನಂತರ ಆರ್ಡರ್ಗಳು ಟ್ಯಾಪ್ ಮಾಡಿ .