ನಿಮ್ಮ ಆ್ಯಪ್‌ನಲ್ಲಿ ಇರುವ ನಿಮ್ಮ ಹೆಸರು, ಇಮೇಲ್, ಫೋನ್ ಸಂಖ್ಯೆ ಮತ್ತು ಪ್ರೊಫೈಲ್ ಚಿತ್ರವನ್ನು ನೀವು ನವೀಕರಿಸಬಹುದು:
ನಿಮ್ಮ ಖಾತೆಯಲ್ಲಿ ನೀವು ಬದಲಾವಣೆಗಳನ್ನು ಮಾಡುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಪರಿಶೀಲನೆ ಕೋಡ್‌ಗಳನ್ನು ಬಳಸುತ್ತೇವೆ. ನೀವು ಬದಲಾಯಿಸುವ ವಿವರಗಳ ಆಧಾರದ ಮೇಲೆ ಏನನ್ನು ನಿರೀಕ್ಷಿಸಬಹುದು ಎನ್ನುವುದು ಇಲ್ಲಿದೆ:
ಫೋನ್ ಸಂಖ್ಯೆ:: ಪಠ್ಯ ಸಂದೇಶದ ಮೂಲಕ ನೀವು ಪರಿಶೀಲನೆ ಕೋಡ್ ಅನ್ನು ಸ್ವೀಕರಿಸುತ್ತೀರಿ. ಬದಲಾವಣೆಯನ್ನು ದೃಢೀಕರಿಸಲು ನಿಮ್ಮ ಆ್ಯಪ್‌ನಲ್ಲಿ ಕೋಡ್ ನಮೂದಿಸಿ.
ಇಮೇಲ್ (iOS ಮಾತ್ರ): ನಿಮ್ಮ ಹೊಸ ವಿಳಾಸಕ್ಕೆ ನಾವು ಪರಿಶೀಲನೆ ಕೋಡ್ ಅನ್ನು ಇಮೇಲ್ ಮಾಡುತ್ತೇವೆ. ಬದಲಾವಣೆ ದೃಢೀಕರಿಸಲು ನಿಮ್ಮ ಆ್ಯಪ್‌ನಲ್ಲಿ ಕೋಡ್ ಅನ್ನು ನಮೂದಿಸಿ. ನಿಮ್ಮ ಹಳೆಯ ಇಮೇಲ್ ವಿಳಾಸಕ್ಕೂ ಸಹ ಅಧಿಸೂಚನೆಯ / ನೋಟಿಫಿಕೇಶನ್ ಇಮೇಲ್ ಕಳುಹಿಸುತ್ತೇವೆ. ನಿಮಗೆ ಇಮೇಲ್ ತಲುಪದೇ ಇದ್ದಲ್ಲಿ, ಇನ್ನೊಂದು ಕೋಡ್‌ಗಾಗಿ ವಿನಂತಿ ಮಾಡುವ ಮುನ್ನ ನಿಮ್ಮ ಸ್ಪಾಮ್ ಅಥವಾ ಜಂಕ್ ಫೋಲ್ಡರ್‌ಗಳನ್ನು ಹಾಗೂ ನಿಮ್ಮ ಇಮೇಲ್ ವಿಳಾಸದ ಅಕ್ಷರಗಳನ್ನು ಪರಿಶೀಲಿಸಿ. ಆಗಲೂ ನಿಮಗೆ ಪರಿಶೀಲನೆ ಕೋಡ್ ಬರದಿದ್ದಲ್ಲಿ, "ನನಗೆ ಸಮಸ್ಯೆ ಇದೆ" ಟ್ಯಾಪ್ ಮಾಡಿ.
ಪಾಸ್‌ವರ್ಡ್: ನಿಮ್ಮ ಪ್ರಸ್ತುತ ಪಾಸ್ವರ್ಡ್ ಅನ್ನು ಆ್ಯಪ್‌ನಲ್ಲಿ ನಮೂದಿಸಲು ನಿಮಗೆ ಪ್ರಾಂಪ್ಟ್ ಮಾಡಲಾಗುವುದು. ಪಾಸ್‍ವರ್ಡ್‌ಗಳು ಕನಿಷ್ಟ 5 ಅಕ್ಷರಗಳಷ್ಟು ಉದ್ದವಿರಬೇಕು.
ಕೆಳಗಿನ ಶಿಫಾರಸುಗಳನ್ನು ಅನುಸರಿಸಲು ನಾವು ನಿಮಗೆ ಹೆಚ್ಚು ಸಲಹೆ ನೀಡುತ್ತೇವೆ:
ನೀವು ಡ್ರೈವರ್ ಅಥವಾ ಡೆಲಿವರಿ ವ್ಯಕ್ತಿಯ ಖಾತೆಯನ್ನು ಸಹ ಹೊಂದಿದ್ದರೆ, ನಿಮ್ಮ ರೈಡರ್ ಅಥವಾ ಉಬರ್ ಈಟ್ಸ್ ಖಾತೆಯನ್ನು ಲಿಂಕ್ ಮಾಡಬಹುದು. ಒಂದು ಖಾತೆಯಲ್ಲಿ ನಿಮ್ಮ ಫೋನ್ ಸಂಖ್ಯೆ, ಇಮೇಲ್ ಅಥವಾ ಪಾಸ್‌ವರ್ಡ್ ಅನ್ನು ನೀವು ನವೀಕರಿಸಿದರೆ ಅದು ಎರಡೂ ಖಾತೆಗಳಲ್ಲಿ ಪ್ರತಿಫಲಿಸುತ್ತದೆ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನವೀಕರಿಸುವಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಹೊಂದಿದ್ದರೆ, ನಮಗೆ ತಿಳಿಸಿ:
ಪಾವತಿ ವಿಧಾನಗಳನ್ನು ನಿರ್ವಹಿಸಲು, ಕೆಳಗಿನ ಲೇಖನದಲ್ಲಿನ ಹಂತಗಳನ್ನು ಅನುಸರಿಸಿ:
ನಿಮ್ಮ ಅಧಿಸೂಚನೆ ಮತ್ತು ಸಂವಹನ ಸೆಟ್ಟಿಂಗ್‌ಗಳನ್ನು ನವೀಕರಿಸಲು, ದಯವಿಟ್ಟು "ನಾನು ಇಮೇಲ್, ಪಠ್ಯ ಅಥವಾ ಪುಶ್ ಅಧಿಸೂಚನೆ ಸೆಟ್ಟಿಂಗ್‌ಗಳನ್ನು ನವೀಕರಿಸಲು ಬಯಸುತ್ತೇನೆ" ಲೇಖನಕ್ಕೆ ನ್ಯಾವಿಗೇಟ್ ಮಾಡಿ