ಪಾವತಿಯ ವಿಧಾನವನ್ನು ನಾನು ಹೇಗೆ ನವೀಕರಿಸುವುದು ಅಥವಾ ಅಳಿಸುವುದು?

ಆದ್ಯತೆಯ ಪಾವತಿ ವಿಧಾನವನ್ನು ಸೇರಿಸುವುದು ಹಾಗೂ ಆಯ್ಕೆ ಮಾಡುವುದು ನಿಮಗೆ ಸವಾರಿಯನ್ನು ವಿನಂತಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ದೇಶ ಮತ್ತು ನಗರವನ್ನು ಅವಲಂಬಿಸಿ, ನೀವು ಕ್ರೆಡಿಟ್ ಕಾರ್ಡ್‌ಗಳು, ನಗದು ಅಥವಾ PayPal ಖಾತೆಯಂತಹ ಪಾವತಿ ವಿಧಾನಗಳನ್ನು ಸೇರಿಸಬಹುದು. ಆರ್ಡರ್ ಅನ್ನು ತಲುಪಿಸಿದ ನಂತರ, ನೀವು ಆಯ್ಕೆ ಮಾಡಿದ ಪಾವತಿ ವಿಧಾನಕ್ಕೆ ಶುಲ್ಕವನ್ನು ವಿಧಿಸಲಾಗುತ್ತದೆ.

ಪಾವತಿ ವಿಧಾನವನ್ನು ಸೇರಿಸಿ

  1. "ಖಾತೆ" ಮತ್ತು ನಂತರ "ವ್ಯಾಲೆಟ್" ಟ್ಯಾಪ್ ಮಾಡಿ.
  2. "ಪಾವತಿಯನ್ನು ಸೇರಿಸಿ" ಟ್ಯಾಪ್ ಮಾಡಿ.
  3. ಕಾರ್ಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ಕಾರ್ಡ್ ಮಾಹಿತಿಯನ್ನು ಹಸ್ತಚಾಲಿತವಾಗಿ ನಮೂದಿಸುವ ಮೂಲಕ ಅಥವಾ ಪರ್ಯಾಯ ಪಾವತಿ ಪ್ರಕಾರವನ್ನು ಸೇರಿಸುವ ಮೂಲಕ ಪಾವತಿ ವಿಧಾನವನ್ನು ಸೇರಿಸಿಕೊಳ್ಳಿ.

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡಲು:

  1. ಕಾರ್ಡ್ ಸ್ಕ್ಯಾನ್ ಮಾಡಲು, ಕ್ಯಾಮರಾ ಐಕಾನ್ ಟ್ಯಾಪ್ ಮಾಡಿ. ನಿಮ್ಮ ಫೋನ್ Uber ಆ್ಯಪ್‌ ಕ್ಯಾಮರಾ ಬಳಸಲು ಅನುಮತಿ ಕೇಳಬಹುದು.
  2. ನಿಮ್ಮ ಫೋನಿನ ಸ್ಕ್ರೀನಿನಲ್ಲಿ ನಿಮ್ಮ ಕಾರ್ಡ್ ಅನ್ನು ಕೇಂದ್ರೀಕರಿಸಿ ಅದರಿಂದ ಎಲ್ಲಾ 4 ಭಾಗಗಳು ಗ್ರೀನ್ ಬಣ್ಣದಲ್ಲಿ ಮಿಂಚುತ್ತವೆ. ಉಬ್ಬು ಅಕ್ಷರಗಳನ್ನು ಮತ್ತು ಸಂಖ್ಯೆಗಳನ್ನು ಹೊಂದಿರುವ ಕಾರ್ಡ್‌ಗಳು ಸಾಮಾನ್ಯವಾಗಿ ಸ್ಕ್ಯಾನ್ ಮಾಡಲು ಸುಲಭವಾಗಿರುತ್ತವೆ.
  3. ಕಾರ್ಡ್‌ನ ಮುಕ್ತಾಯ ದಿನಾಂಕ, CVV ಸಂಖ್ಯೆ ಮತ್ತು ಬಿಲ್ಲಿಂಗ್ ZIP ಅಥವಾ ಪೋಸ್ಟಲ್ ಕೋಡ್ ಅನ್ನು ನಮೂದಿಸಿ.
  4. "ಸೇವ್" ಟ್ಯಾಪ್ ಮಾಡಿ.

ಹಸ್ತಚಾಲಿತವಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸೇರಿಸಲು:

  1. ನಿಮ್ಮ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
  2. ಕಾರ್ಡ್‌ನ ಮುಕ್ತಾಯ ದಿನಾಂಕ, CVV ಸಂಖ್ಯೆ ಮತ್ತು ಬಿಲ್ಲಿಂಗ್ ZIP ಅಥವಾ ಪೋಸ್ಟಲ್ ಕೋಡ್ ಅನ್ನು ನಮೂದಿಸಿ.
  3. "ಸೇವ್" ಟ್ಯಾಪ್ ಮಾಡಿ.

ಕಾರ್ಡ್ ಮಾಹಿತಿಯನ್ನು ನವೀಕರಿಸಿ

ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನ ಮುಕ್ತಾಯ ದಿನಾಂಕ, CCV ಸಂಖ್ಯೆ ಮತ್ತು ಬಿಲ್ಲಿಂಗ್ ZIP ಅಥವಾ ಪೋಸ್ಟಲ್ ಕೋಡ್ ಅನ್ನು ತಿದ್ದುಪಡಿ ಮಾಡಬಹುದು.

  1. ಮೊದಲು "ಖಾತೆ" ನಂತರ "ವ್ಯಾಲೆಟ್" ಆಯ್ಕೆ‌ ಮಾಡಿ.
  2. ನೀವು ನವೀಕರಿಸಲು ಬಯಸುವ ಪಾವತಿ ಆಯ್ಕೆಯನ್ನು ಆರಿಸಿಕೊಳ್ಳಿ.
  3. ಮೂರು ಡಾಟ್ ಇರುವ ಐಕಾನ್ ಅನ್ನು ಟ್ಯಾಪ್ ಮಾಡಿ, ನಂತರ "ತಿದ್ದುಪಡಿ" ಅನ್ನು ಟ್ಯಾಪ್ ಮಾಡಿ.
  4. ಬದಲಾವಣೆಗಳನ್ನು ಮಾಡಿ, ನಂತರ "ಸೇವ್" ಟ್ಯಾಪ್ ಮಾಡಿ.

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ತಿದ್ದುಪಡಿ ಮಾಡಲು ಸಾಧ್ಯವಾಗದಿದ್ದರೂ ಸಹ, ಕಾರ್ಡ್ ಅನ್ನು ನಿಮ್ಮ ಖಾತೆಯಿಂದ ತೆಗೆದುಹಾಕಬಹುದು ಮತ್ತು ನಂತರ ಹೊಸ ಪಾವತಿ ವಿಧಾನವಾಗಿ ಸೇರಿಸಬಹುದು.

ಪಾವತಿ ವಿಧಾನವನ್ನು ಆಳಿಸಿ:

ನಿಮ್ಮ ಖಾತೆಯು ಎಲ್ಲಾ ಸಮಯದಲ್ಲೂ ಕನಿಷ್ಠ ಒಂದು ಪಾವತಿ ವಿಧಾನವನ್ನು ಹೊಂದಿರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಏಕೈಕ ಪಾವತಿ ವಿಧಾನವನ್ನು ಅಳಿಸಲು ನೀವು ಬಯಸಿದಲ್ಲಿ, ನೀವು ಮೊದಲು ಹೊಸದನ್ನು ಸೇರಿಸಬೇಕಾಗುತ್ತದೆ.

  1. ಮೊದಲು "ಖಾತೆ" ನಂತರ "ವ್ಯಾಲೆಟ್" ಆಯ್ಕೆ ಮಾಡಿ.
  2. ನೀವು ಅಳಿಸಲು ಬಯಸುವ ಕಾರ್ಡ್ ಅನ್ನು ಆಯ್ಕೆ ಮಾಡಿ.
  3. ಮೇಲಿನ ಬಲ ಭಾಗದಲ್ಲಿರುವ ಮೂರು ಡಾಟ್ ಐಕಾನ್ ಅನ್ನು ಟ್ಯಾಪ್ ಮಾಡಿ.
  4. "ಅಳಿಸು" ಟ್ಯಾಪ್ ಮಾಡಿ ನಂತರ ದೃಢೀಕರಿಸಿ.