Uber ಗಿಫ್ಟ್ ಕಾರ್ಡುಗಳು

ನಿಮ್ಮ ಖಾತೆಗೆ Uber ಗಿಫ್ಟ್ ಕಾರ್ಡ್ ಅನ್ನು ಹೇಗೆ ಸೇರಿಸುವುದು

  1. ನಿಮ್ಮ ಆ್ಯಪ್‌ನಲ್ಲಿ ಮೆನು ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು "ವಾಲೆಟ್" ಆಯ್ಕೆಮಾಡಿ.
  2. "ಹಣವನ್ನು ಸೇರಿಸಿ" ಆಯ್ಕೆಮಾಡಿ.
  3. "ಗಿಫ್ಟ್ ಕಾರ್ಡ್" ಆಯ್ಕೆಮಾಡಿ.
  4. ನಿಮ್ಮಗಿಫ್ಟ್ ಕೋಡ್ ಗೋಚರಿಸುತ್ತಿರುವಂತೆ ನಮೂದಿಸಿ (ಮದ್ಯದಲ್ಲಿ ಜಾಗವನ್ನು ಬಿಡದೇ).

ನಿಮ್ಮ Uber Cash ಬ್ಯಾಲೆನ್ಸ್‌ಗೆ ಗಿಫ್ಟ್ ಕಾರ್ಡ್‌ಗಳನ್ನು ನೇರವಾಗಿ ಸೇರಿಸಲಾಗುತ್ತದೆ. ಗಿಫ್ಟ್ ಕಾರ್ಡ್ ಅನ್ನು Uber ಖಾತೆಗೆ ಸೇರಿಸಿದ ಬಳಿಕ, ಅದನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

ಗಿಫ್ಟ್ ಕಾರ್ಡ್‌ಗಳನ್ನು ಬಳಸುವುದು

Uber ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಿದ ದೇಶದಲ್ಲಿ ಮಾತ್ರವೇ ಬಳಸಬಹುದಾಗಿರುತ್ತದೆ. ಕುಟುಂಬದ ಪ್ರೊಫೈಲ್‌ಗಳು ಅಥವಾ ನಿಗದಿತ ಸವಾರಿಗಳಿಗಾಗಿ ಅವುಗಳನ್ನು ಬಳಸಲು ಬರುವುದಿಲ್ಲ.

ನಿಮ್ಮ Uber Cash ಬ್ಯಾಲೆನ್ಸ್‌ನಲ್ಲಿ ಲೋಡ್ ಮಾಡಲಾದ ಗಿಫ್ಟ್ ಕಾರ್ಡ್‌ಗಳು ನಿಮ್ಮ ಮುಂದಿನ ಟ್ರಿಪ್ ಅಥವಾ ಆರ್ಡರ್‌ಗೆ ಡೀಫಾಲ್ಟ್ ಆಗಿ ಅನ್ವಯಿಸುತ್ತವೆ, ಆದರೆ ನಿಮ್ಮ ವಿನಂತಿಯನ್ನು ಮಾಡುವ ಮೊದಲು ನೀವು ಬೇರೆ ಪಾವತಿ ವಿಧಾನವನ್ನು ಆಯ್ಕೆ ಮಾಡಬಹುದು.

ನಿಮ್ಮ ಗಿಫ್ಟ್ ಕಾರ್ಡ್ ಬ್ಯಾಲೆನ್ಸ್ ನಿಮ್ಮ ಟ್ರಿಪ್ ವೆಚ್ಚಕ್ಕಿಂತ ಕಡಿಮೆಯಿದ್ದಲ್ಲಿ ನೀವು ಸವಾರಿಗಾಗಿ ವಿನಂತಿಸುವ ಮೊದಲು ಹೆಚ್ಚುವರಿ ಗಿಫ್ಟ್ ಕೋಡ್ ಅಥವಾ ಪಾವತಿ ವಿಧಾನವನ್ನು ಸೇರಿಸಲು ನಿಮ್ಮನ್ನು ಕೇಳಲಾಗುತ್ತದೆ. ಆ ಪಾವತಿ ವಿಧಾನದ ಮೇಲೆ ಅಧಿಕೃತ ಹಿಡಿತ ಇರಬಹುದು, ಆದರೆ ಗಿಫ್ಟ್ ಕಾರ್ಡ್‌ ಅನ್ನು ಚಾರ್ಜ್ ಮಾಡಿದ ನಂತರ ಅದನ್ನು ರದ್ದುಗೊಳಿಸಲಾಗುತ್ತದೆ.

Uber ಮತ್ತು Uber Eats ಆ್ಯಪ್‌ಗಳಲ್ಲಿ ಗಿಫ್ಟ್ ಕಾರ್ಡು‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದಾಗಿದೆ. ಗಿಫ್ಟ್ ಕಾರ್ಡು‌ಗಳಿಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಖರೀದಿಯ ರಾಜ್ಯ / ಪ್ರದೇಶಗಳನ್ನು ಅವಲಂಬಿಸಿ, ಈ ಕಾರ್ಡ್ ಅನ್ನು Bancorp Card Services, Inc. ಅಥವಾ The Bancorp Bank ನೀಡುತ್ತದೆ.

ಕಾನೂನಿನ ಪ್ರಕಾರ ಅಗತ್ಯವಿಲ್ಲದಿದ್ದಲ್ಲಿ, ಗಿಫ್ಟ್ ಕಾರ್ಡ್‌ಗಳನ್ನು ನಗದು, ಮರುಪಾವತಿ ಅಥವಾ ಹಿಂತಿರುಗಿಸಲು ರಿಡೀಮ್ ಮಾಡಲಾಗುವುದಿಲ್ಲ.

Uber ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸುವುದು ಹೇಗೆ

ನೀವು Uber ಗಿಫ್ಟ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಅಥವಾ ಸ್ಥಳೀಯ ಚಿಲ್ಲರೆ ವ್ಯಾಪಾರಿಗಳಿಂದ ಖರೀದಿಸಬಹುದು:

ಗಿಫ್ಟ್ ಕಾರ್ಡ್‌ಗಾಗಿ ನಿಮಗೆ ಸಹಾಯ ಬೇಕಾದಲ್ಲಿ, ಸಮಸ್ಯೆಗೆ ಹೆಚ್ಚು ಹೊಂದಿಕೆಯಾಗುವ ಕೆಳಗಿನ ಲಿಂಕ್ ಅನ್ನು ದಯವಿಟ್ಟು ಆಯ್ಕೆ ಮಾಡಿ: