Uber ಅಥವಾ Uber Eats ಆ್ಯಪ್ ಬಳಸಿ ನೀವು ಪಾವತಿ ವಿಧಾನಗಳನ್ನು ನವೀಕರಿಸಬಹುದು ಅಥವಾ ಅಳಿಸಬಹುದು.
- ಮೊದಲು "ಖಾತೆ" ನಂತರ "ವಾಲೆಟ್" ಆಯ್ಕೆ ಮಾಡಿ.
- ಪಾವತಿ ಆಯ್ಕೆಯನ್ನು ಆರಿಸಿ.
- ಪಾವತಿ ಮಾಹಿತಿಯನ್ನು ನವೀಕರಿಸಲು "ಎಡಿಟ್ ಮಾಡಿ" ಟ್ಯಾಪ್ ಮಾಡಿ ಅಥವಾ ಅಳಿಸಲು "ಪಾವತಿ ವಿಧಾನವನ್ನು ತೆಗೆದುಹಾಕಿ" ಟ್ಯಾಪ್ ಮಾಡಿ.
- ನೀವು ಮುಗಿಸಿದ ನಂತರ "ಉಳಿಸಿ" ಅಥವಾ "ದೃಢೀಕರಿಸಿ" ಟ್ಯಾಪ್ ಮಾಡಲು ಖಚಿತವಾಗಿರಿ.
ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ನ ಮುಕ್ತಾಯ ದಿನಾಂಕ, CCV ಸಂಖ್ಯೆ ಮತ್ತು ಬಿಲ್ಲಿಂಗ್ ಜಿಪ್ ಅಥವಾ ಪೋಸ್ಟಲ್ ಕೋಡ್ ಅನ್ನು ಮಾತ್ರ ಎಡಿಟ್ ಮಾಡಬಹುದು. ಕಾರ್ಡ್ ಸಂಖ್ಯೆಯನ್ನು ಎಡಿಟ್ ಮಾಡಲು ಸಾಧ್ಯವಾಗದಿದ್ದರೂ ಸಹ, ಕಾರ್ಡ್ ಅನ್ನು ನಿಮ್ಮ ಖಾತೆಯಿಂದ ತೆಗೆದುಹಾಕಬಹುದು ಹಾಗೂ ನಂತರ ಹೊಸ ಪಾವತಿ ವಿಧಾನವಾಗಿ ಮತ್ತೊಮ್ಮೆ ಸೇರಿಸಬಹುದು.
ನಿಮ್ಮ ಖಾತೆಯು ಎಲ್ಲಾ ಸಮಯದಲ್ಲೂ ಕನಿಷ್ಠ ಒಂದು ಪಾವತಿ ವಿಧಾನವನ್ನು ಹೊಂದಿರಬೇಕಾಗುತ್ತದೆ. ನಿಮ್ಮ ಏಕೈಕ ಪಾವತಿ ವಿಧಾನವನ್ನು ಅಳಿಸಲು ನೀವು ಬಯಸಿದಲ್ಲಿ, ನೀವು ಮೊದಲು ಹೊಸದನ್ನು ಸೇರಿಸಬೇಕಾಗುತ್ತದೆ.
ಪಾವತಿ ವಿಧಾನವನ್ನು ಸೇರಿಸುವುದು
- ಮೊದಲು "ಖಾತೆ" ನಂತರ "ವಾಲೆಟ್" ಅನ್ನು ಟ್ಯಾಪ್ ಮಾಡಿ
- "ಪಾವತಿಯನ್ನು ಸೇರಿಸಿ" ಟ್ಯಾಪ್ ಮಾಡಿ
- ಕಾರ್ಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ಕಾರ್ಡ್ ಮಾಹಿತಿಯನ್ನು ಹಸ್ತಚಾಲಿತವಾಗಿ ನಮೂದಿಸುವ ಮೂಲಕ ಅಥವಾ ಪರ್ಯಾಯ ಪಾವತಿ ಪ್ರಕಾರವನ್ನು ಸೇರಿಸುವ ಮೂಲಕ ಪಾವತಿ ವಿಧಾನವನ್ನು ಸೇರಿಸಿ.
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡುವುದು
- ಕಾರ್ಡ್ ಸ್ಕ್ಯಾನ್ ಮಾಡಲು, "ಕಾರ್ಡ್ ಸಂಖ್ಯೆ" ಬಾರ್ನಲ್ಲಿ ಕ್ಯಾಮೆರಾ ಐಕಾನ್ ಟ್ಯಾಪ್ ಮಾಡಿ. ನಿಮ್ಮ ಆ್ಯಪ್ ಕ್ಯಾಮರಾ ಬಳಸುವುದಕ್ಕಾಗಿ ನಿಮ್ಮ ಫೋನ್ ಅನುಮತಿ ಕೇಳಬಹುದು.
- ನಿಮ್ಮ ಫೋನ್ನ ಸ್ಕ್ರೀನ್ನಲ್ಲಿ ನಿಮ್ಮ ಕಾರ್ಡ್ ಅನ್ನು ಕೇಂದ್ರೀಕರಿಸಿ ಅದರಿಂದ ಎಲ್ಲಾ 4 ಭಾಗಗಳು ಗ್ರೀನ್ ಬಣ್ಣದಲ್ಲಿ ಮಿಂಚುತ್ತವೆ. ಉಬ್ಬು ಅಕ್ಷರಗಳನ್ನು ಮತ್ತು ಸಂಖ್ಯೆಗಳನ್ನು ಹೊಂದಿರುವ ಕಾರ್ಡ್ಗಳು ಸಾಮಾನ್ಯವಾಗಿ ಸ್ಕ್ಯಾನ್ ಮಾಡಲು ಸುಲಭವಾಗಿರುತ್ತವೆ.
- ಕಾರ್ಡ್ನ ಮುಕ್ತಾಯ ದಿನಾಂಕ, CVV ಸಂಖ್ಯೆ ಮತ್ತು ಬಿಲ್ಲಿಂಗ್ ZIP ಕೋಡ್ ಅಥವಾ ಪೋಸ್ಟಲ್ ಕೋಡ್ ಅನ್ನು ನಮೂದಿಸಿ.
- "ಉಳಿಸು" ಟ್ಯಾಪ್ ಮಾಡಿ.
ಹಿಂದಿನ ಆರ್ಡರ್ಗಾಗಿ ಪಾವತಿ ವಿಧಾನವನ್ನು ಬದಲಾಯಿಸುವ ಕುರಿತು ಸಹಾಯಕ್ಕಾಗಿ, ಈ ಕೆಳಗಿನ ಲೇಖನವನ್ನು ನೋಡಿ: