ರಸೀತಿಯನ್ನು ನಾನು ಹೇಗೆ ಪರಿಶೀಲಿಸುವುದು ಮತ್ತು ಡೌನ್‌ಲೋಡ್ ಮಾಡುವುದು?

ಒಂದು ಆರ್ಡರ್ ಪೂರ್ಣಗೊಳಿಸಿದಾಗ, ನಿಮ್ಮ ಖಾತೆಯಲ್ಲಿರುವ ಇಮೇಲ್ ವಿಳಾಸಕ್ಕೆ ರಸೀತಿಯನ್ನು ಕಳುಹಿಸಲಾಗುತ್ತದೆ. ನೀವು ರಸೀತಿಗಳನ್ನು ಸ್ವೀಕರಿಸದಿದ್ದಲ್ಲಿ, ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ನಿಮ್ಮ ಇಮೇಲ್ ವಿಳಾಸದ ಸ್ಪ್ಯಾಮ್ ಅಥವಾ ಜಂಕ್ ಫೋಲ್ಡರ್ ಪರಿಶೀಲಿಸಿ.

ಆ್ಯಪ್‌ನಲ್ಲಿ ಹಿಂದಿನ ರಸೀತಿಗಳನ್ನು ಪರಿಶೀಲಿಸಲು:

  1. ಮುಖ್ಯ ಪರದೆಯ ಕೆಳಭಾಗದಲ್ಲಿರುವ ಪ್ರೊಫೈಲ್ ಐಕಾನ್ ಟ್ಯಾಪ್ ಮಾಡಿ
  2. ಮೆನುವಿನಿಂದ "ಆರ್ಡರ್‌ಗಳು" ಆಯ್ಕೆಮಾಡಿ.
  3. ನೀವು ರಸೀತಿಯನ್ನು ವೀಕ್ಷಿಸಲು ಬಯಸುವ ಆರ್ಡರ್ ಅನ್ನು ಆಯ್ಕೆಮಾಡಿ.
  4. "ರಸೀತಿಯನ್ನು ವೀಕ್ಷಿಸಿ" ಟ್ಯಾಪ್ ಮಾಡಿ.