ನನ್ನ ಖಾತೆ ಮಾಹಿತಿಯನ್ನು ನಾನು ಹೇಗೆ ಪರಿಷ್ಕರಿಸುವುದು?

ನಿಮ್ಮ ಆ್ಯಪ್‌ನಲ್ಲಿ ಇರುವ ನಿಮ್ಮ ಹೆಸರು, ಇಮೇಲ್, ಫೋನ್ ಸಂಖ್ಯೆ ಮತ್ತು ಪ್ರೊಫೈಲ್ ಚಿತ್ರವನ್ನು ನೀವು ನವೀಕರಿಸಬಹುದು: ಸ್ಕ್ರೀನ್ ಕೆಳಭಾಗದಲ್ಲಿರುವ "ಖಾತೆ" ಅನ್ನು ಟ್ಯಾಪ್ ಮಾಡಿ. ನಿಮ್ಮ ಪ್ರೊಫೈಲ್ ಐಕಾನ್ ನಂತರ "ಖಾತೆ ತಿದ್ದುಪಡಿ ಮಾಡಿ" ಟ್ಯಾಪ್ ಮಾಡಿ. ನೀವು ಬದಲಾವಣೆ ಮಾಡಲು ಬಯಸುವ ವಿವರವನ್ನು ಟ್ಯಾಪ್ ಮಾಡಿ ಮತ್ತು ನವೀಕರಿಸಿದ ಮಾಹಿತಿಯನ್ನು ನಮೂದಿಸಿ. ನಿಮ್ಮ ಬದಲಾವಣೆಯನ್ನು ದೃಢೀಕರಿಸಲು ವೆರಿಫಿಕೇಶನ್ ಕೋಡ್ ಅಥವಾ ಪ್ರಸ್ತುತ ಪಾಸ್‌ವರ್ಡ್ ಅನ್ನು ನಮೂದಿಸಲು ನಿಮಗೆ ಪ್ರಾಂಪ್ಟ್ ಮಾಡಲಾಗುತ್ತದೆ.

ಖಾತೆ ಬದಲಾವಣೆಗಳನ್ನು ದೃಢೀಕರಿಸಲಾಗುತ್ತಿದೆ

ನಿಮ್ಮ ಖಾತೆಯಲ್ಲಿ ನೀವು ಬದಲಾವಣೆಗಳನ್ನು ಮಾಡುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಪರಿಶೀಲನೆ ಕೋಡ್‌ಗಳನ್ನು ಬಳಸುತ್ತೇವೆ. ನೀವು ಬದಲಾಯಿಸುವ ವಿವರಗಳ ಆಧಾರದ ಮೇಲೆ ಏನನ್ನು ನಿರೀಕ್ಷಿಸಬಹುದು ಎನ್ನುವುದು ಇಲ್ಲಿದೆ:

ಫೋನ್ ಸಂಖ್ಯೆ:: ಪಠ್ಯ ಸಂದೇಶದ ಮೂಲಕ ನೀವು ಪರಿಶೀಲನೆ ಕೋಡ್ ಅನ್ನು ಸ್ವೀಕರಿಸುತ್ತೀರಿ. ಬದಲಾವಣೆಯನ್ನು ದೃಢೀಕರಿಸಲು ನಿಮ್ಮ ಆ್ಯಪ್‌ನಲ್ಲಿ ಕೋಡ್ ನಮೂದಿಸಿ.

ಇಮೇಲ್ ನಿಮ್ಮ ಹೊಸ ವಿಳಾಸಕ್ಕೆ ನಾವು ಪರಿಶೀಲನೆ ಕೋಡ್ ಅನ್ನು ಇಮೇಲ್ ಮಾಡುತ್ತೇವೆ. ಬದಲಾವಣೆ ದೃಢೀಕರಿಸಲು ನಿಮ್ಮ ಆ್ಯಪ್‌ನಲ್ಲಿ ಕೋಡ್ ಅನ್ನು ನಮೂದಿಸಿ. ನಿಮ್ಮ ಹಳೆಯ ಇಮೇಲ್ ವಿಳಾಸಕ್ಕೂ ಸಹ ಅಧಿಸೂಚನೆಯ / ನೋಟಿಫಿಕೇಶನ್ ಇಮೇಲ್ ಕಳುಹಿಸುತ್ತೇವೆ. ನಿಮಗೆ ಇಮೇಲ್ ತಲುಪದೇ ಇದ್ದಲ್ಲಿ, ಇನ್ನೊಂದು ಕೋಡ್‌ಗಾಗಿ ವಿನಂತಿ ಮಾಡುವ ಮುನ್ನ ನಿಮ್ಮ ಸ್ಪಾಮ್ ಅಥವಾ ಜಂಕ್ ಫೋಲ್ಡರ್‌ಗಳನ್ನು ಹಾಗೂ ನಿಮ್ಮ ಇಮೇಲ್ ವಿಳಾಸದ ಅಕ್ಷರಗಳನ್ನು ಪರಿಶೀಲಿಸಿ. ಆಗಲೂ ನಿಮಗೆ ಪರಿಶೀಲನೆ ಕೋಡ್ ಬರದಿದ್ದಲ್ಲಿ, "ನನಗೆ ಸಮಸ್ಯೆ ಇದೆ" ಟ್ಯಾಪ್ ಮಾಡಿ.

ಪಾಸ್‌ವರ್ಡ್: ನಿಮ್ಮ ಪ್ರಸ್ತುತ ಪಾಸ್‍‌ವರ್ಡ್ ಅನ್ನು ಆ್ಯಪ್‌ನಲ್ಲಿ ನಮೂದಿಸಲು ನಿಮಗೆ ಪ್ರಾಂಪ್ಟ್ ಮಾಡಲಾಗುವುದು. ಪಾಸ್‍‌ವರ್ಡ್‌ಗಳು ಕನಿಷ್ಟ 5 ಅಕ್ಷರಗಳಷ್ಟು ಉದ್ದವಿರಬೇಕು.

ಕೆಳಗಿನ ಶಿಫಾರಸುಗಳನ್ನು ಅನುಸರಿಸಲು ನಾವು ನಿಮಗೆ ಹೆಚ್ಚು ಸೂಚಿಸುತ್ತೇವೆ:

    ನಿಮ್ಮ ಇಮೇಲ್‌ನ ಕಾಗುಣಿತವನ್ನು ಪರೀಕ್ಷಿಸಲು ಮತ್ತು ನಿಮ್ಮ ಹೊಸ ಫೋನ್ ಸಂಖ್ಯೆಯನ್ನು ನೀವು ಸರಿಯಾಗಿ ನಮೂದಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ಸವಾರಿಗಳು ಮತ್ತು Uber Eats ಎರಡಕ್ಕೂ ಬಳಕೆದಾರರು ಕೇವಲ ಒಂದೇ Uber ಖಾತೆಯನ್ನು ಹೊಂದಿರಬೇಕೆಂದು ನಾವು ಶಿಫಾರಸು ಮಾಡುತ್ತೇವೆ.
  • ನೀವು ಚಾಲಕ ಅಥವಾ ಡೆಲಿವರಿ ಪರ್ಸನ್ ಖಾತೆಯನ್ನು ಸಹ ಹೊಂದಿದ್ದರೆ, ನಿಮ್ಮ ರೈಡರ್ ಅಥವಾ ಉಬರ್ ಈಟ್ಸ್ ಖಾತೆಯನ್ನು ಲಿಂಕ್ ಮಾಡಬಹುದು. ನಿಮ್ಮ ಫೋನ್ ಸಂಖ್ಯೆ, ಇಮೇಲ್ ಅಥವಾ ಪಾಸ್ವರ್ಡ್ ಅನ್ನು ಒಂದು ಖಾತೆಯಲ್ಲಿ ಅಪ್ಡೇಟ್ ಮಾಡಿದರೆ ಅದು ಎರಡೂ ಖಾತೆಗಳಲ್ಲಿ ಪ್ರತಿಫಲಿಸುತ್ತದೆ.

  • ನಿಮ್ಮ ಹೆಸರಿಗೆ ಕೆಲವು ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ, ಅವುಗಳು ಯಾವುದೆಂದರೆ:
    • ಸೂಕ್ತವಲ್ಲದ ಪದಗಳು
    • - ಸಂಖ್ಯೆಗಳೊಂದಿಗೆ ಹೆಸರುಗಳು - ಎಮೋಜಿಗಳೊಂದಿಗೆ ಹೆಸರುಗಳು - ಚಿಹ್ನೆಗಳ ಬಳಕೆ (!, ?, ಇತ್ಯಾದಿ)

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನವೀಕರಿಸುವಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಹೊಂದಿದ್ದರೆ, ನಮಗೆ ಇಲ್ಲಿ ತಿಳಿಸಿ.