Where should I meet my Delivery Partner?

ಡೆಲಿವರಿ ವ್ಯಕ್ತಿಯನ್ನು ನೀವು ಎಲ್ಲಿ ಭೇಟಿಯಾಗಬೇಕು ಎನ್ನುವುದು ನಿಮ್ಮ ಆರ್ಡರ್ ಮಾಡುವಾಗ ನೀವು ಆಯ್ಕೆ ಮಾಡಿಕೊಂಡಿರುವ 3 ಡೆಲಿವರಿ ಆಯ್ಕೆಗಳಲ್ಲಿ ಯಾವುದು ಎನ್ನುವುದರ ಮೇಲೆ ಅವಲಂಬಿಸಿರುತ್ತದೆ:

  1. ಬಾಗಿಲ ಬಳಿ ಇಡಿ: ನಿಮ್ಮ ಆರ್ಡರ್, ನಿಮ್ಮ ಮನೆಯ ಬಾಗಿಲ ಬಳಿಗೆ ತಲುಪುತ್ತದೆ
  2. ಮನೆಯ ಬಾಗಿಲಿನ ಬಳಿ ಭೇಟಿ ಮಾಡಿ: ನಿಮ್ಮ ಬಾಗಿಲ ಬಳಿಯಲ್ಲಿ ನೀವು ಡೆಲಿವರಿ ವ್ಯಕ್ತಿಯನ್ನು ಭೇಟಿಯಾಗುತ್ತೀರಿ
  3. ಹೊರಗೆ ಪಿಕಪ್ ಮಾಡುತ್ತೇನೆ: ನೀವು ಡೆಲಿವರಿ ವ್ಯಕ್ತಿಯನ್ನು ಹೊರಗೆ ಭೇಟಿಯಾಗುತ್ತೀರಿ

ನಿಮ್ಮ ಆದ್ಯತೆಯ ಡೆಲಿವರಿ ಆಯ್ಕೆಯನ್ನು ಆರಿಸಿದ ನಂತರ, ನಿಮ್ಮ ಡೆಲಿವರಿ ವಿವರಗಳನ್ನು ನವೀಕರಿಸಲು ಆನ್-ಸ್ಕ್ರೀನ್ ಪ್ರಾಂಪ್ಟ್‌ಗಳನ್ನು ಅನುಸರಿಸಿ.

ನೀವು ಇತರ ವಿಶೇಷ ಡೆಲಿವರಿ ಸೂಚನೆಗಳನ್ನು ಹೊಂದಿದ್ದಲ್ಲಿ, ನಿಮ್ಮ ಆರ್ಡರ್ ಅನ್ನು ದೃಢೀಕರಿಸುವ ಮೊದಲು ನೀವು ಅವುಗಳನ್ನು ಸೇರಿಸಬಹುದು. ಉದಾಹರಣೆಗೆ, ನೀವು ಬಾಗಿಲಲ್ಲಿ ಬಿಡಿ ಡೆಲಿವರಿ ಆಯ್ಕೆಯನ್ನು ಆರಿಸಿದಲ್ಲಿ, ನೀವು ಈ ರೀತಿಯ ವಿಶೇಷ ಸೂಚನೆಗಳನ್ನು ಸೇರಿಸಬಹುದು: “ದಯವಿಟ್ಟು ನನ್ನ ಆರ್ಡರ್ ಅನ್ನು ಮುಂಭಾಗದ ಬಾಗಿಲಿನ ಬಳಿ ಇರುವ ಕುಂಡದಲ್ಲಿ ಹಾಕಿದ ಸಸ್ಯದ ಪಕ್ಕದಲ್ಲಿ ಬಿಡಿ. ಧನ್ಯವಾದಗಳು!".

ಡ್ರಾಪ್‌ಆಫ್‌ಗೆ ಮೊದಲು ನಾನು ನನ್ನ ಡೆಲಿವರಿ ವ್ಯಕ್ತಿಯನ್ನು ಸಂಪರ್ಕಿಸಬಹುದೇ?

ಒಮ್ಮೆ ನಿಮ್ಮ ಆರ್ಡರ್ ಮಾರ್ಗದಲ್ಲಿ ಇರುವಾಗ , ಆರ್ಡರ್ ಟ್ರ್ಯಾಕಿಂಗ್ ಪರದೆಯ ಮೇಲೆ "ಸಂಪರ್ಕ"ಟ್ಯಾಪ್ ಮಾಡುವ ಮೂಲಕ ನಿಮ್ಮ ಡೆಲಿವರಿ ವ್ಯಕ್ತಿಯನ್ನು ನೀವು ನೇರವಾಗಿ ಸಂಪರ್ಕಿಸಬಹುದು. ಇದು ಎಲ್ಲಿದೆ ಎಂದು ನಿಮಗೆ ಖಚಿತವಿಲ್ಲದಿದ್ದಲ್ಲಿ ನಿಖರವಾದ ಡ್ರಾಪ್‌ಆಫ್ ಸ್ಪಾಟ್ ಅನ್ನು ಸಂಘಟಿಸಲು ಇದು ಉತ್ತಮ ಮಾರ್ಗವಾಗಿದೆ. ನಿಮ್ಮ ಡೆಲಿವರಿ ವ್ಯಕ್ತಿಯು ಚಾಲನೆ ಮಾಡುತ್ತಿರಬಹುದು ಮತ್ತು ಫೋನ್‌ಗೆ ಉತ್ತರಿಸಲು ಅಥವಾ ಸಂದೇಶವನ್ನು ಬರೆಯಲು ಸಾಧ್ಯವಾಗದಿರಬಹುದು ಎನ್ನುವುದನ್ನು ನೆನಪಿನಲ್ಲಿಡಿ.