ನಿಮ್ಮ Uber ಡೇಟಾ ಡೌನ್‌ಲೋಡ್‌ನಲ್ಲಿ ಏನಿದೆ?

ನೀವು Uber ಪ್ಲಾಟ್‌ಫಾರ್ಮ್ ಅನ್ನು ಹೇಗೆ ಬಳಸುತ್ತೀರಿ ಎನ್ನುವುದರ ಆಧಾರದ ಮೇಲೆ, ನಿಮ್ಮ ಮಾಹಿತಿ ಡೌನ್‌ಲೋಡ್‌ನ ವಿಷಯಗಳು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:

ನಮ್ಮ ಗೌಪ್ಯತೆ ಸೂಚನೆಯಲ್ಲಿನ "ಮಾಹಿತಿ ಸಂಗ್ರಹಣೆಗಳು ಮತ್ತು ಉಪಯೋಗಗಳು" ವಿಭಾಗದಲ್ಲಿ ಇನ್ನಷ್ಟು ತಿಳಿಯಿರಿ.

ನೀವು ಯಾವ ರೀತಿಯಲ್ಲಿ Uber ಪ್ಲಾಟ್‌ಫಾರ್ಮ್ ಬಳಸುತ್ತೀರಿ ಎನ್ನುವುದರ ಕುರಿತಾದ ಹೆಚ್ಚು ಸಂಬಂಧಿತ ಮಾಹಿತಿಯನ್ನು ನಿಮ್ಮ ಮಾಹಿತಿ ಡೌನ್‌ಲೋಡ್ ಒಳಗೊಂಡಿರುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿ ಕುರಿತು ನಿಮಗೆ ಪ್ರಶ್ನೆಗಳೇನಾದರೂ ಇದ್ದಲ್ಲಿ, ನಿಮ್ಮ ಡೌನ್‌ಲೋಡ್‌ನಲ್ಲಿ ಲಭ್ಯವಿಲ್ಲದ ನಿರ್ದಿಷ್ಟ ಮಾಹಿತಿಯನ್ನು ಸ್ವೀಕರಿಸಲು ಬಯಸಿದಲ್ಲಿ, ನಿಮ್ಮ ಮಾಹಿತಿಯ ತಿದ್ದುಪಡಿಗೆ ವಿನಂತಿಸಲು ಬಯಸಿದಲ್ಲಿ ಅಥವಾ Uber ಡೇಟಾ ರಕ್ಷಣೆ ಅಧಿಕಾರಿ (DPO) ಅನ್ನು ಸಂಪರ್ಕಿಸಲು ಬಯಸಿದಲ್ಲಿ, ನೀವು ವಿನಂತಿಯನ್ನು ಮೂಲಕ ಸಲ್ಲಿಸಬಹುದು.

#ಖಾತೆಯ ಮಾಹಿತಿ ನಿಮ್ಮ ಖಾತೆ ಡೇಟಾವು ಈ ಕೆಳಗಿನಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ:

  • ನೀವು Uber ನೊಂದಿಗೆ ಸೈನ್ ಅಪ್ ಮಾಡಿದ ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸ, ಮೊಬೈಲ್ ನಂಬರ್, ರೇಟಿಂಗ್(ಗಳು) ಮತ್ತು ದಿನಾಂಕ
  • Uber ನೀಡಿದ ರೆಫರಲ್ ಕೋಡ್(ಗಳು)
  • ಪಾವತಿ ವಿಧಾನದ ಮಾಹಿತಿ, ಉದಾಹರಣೆಗೆ ನೀವು ಪಾವತಿ ವಿಧಾನವನ್ನು ರಚಿಸಿದ ಮತ್ತು ನವೀಕರಿಸಿದ ದಿನಾಂಕ, ವಿತರಿಸುವ ಬ್ಯಾಂಕ್‌ನ ಹೆಸರು, ಬಿಲ್ಲಿಂಗ್ ದೇಶ ಮತ್ತು ಪಾವತಿ ವಿಧಾನದ ಮಾದರಿ (ವೀಸಾ, ಡೆಬಿಟ್, ಇತ್ಯಾದಿ.)
  • Uber ನೊಂದಿಗಿನ ಸಹಾಯ ಸೇವೆಗಳ ಸಂಭಾಷಣೆಗಳ ಕುರಿತು ಮೆಟಾಡೇಟಾ
  • ಚಾಲಕ ಮತ್ತು ಸವಾರರ ನಡುವೆ ಅಥವಾ ಡೆಲಿವರಿ ನೀಡುವ ವ್ಯಕ್ತಿ ಮತ್ತು ಗ್ರಾಹಕರ ನಡುವೆ ಸಂವಹನಗಳನ್ನು ಕಳುಹಿಸಲಾಗಿದೆ (ಗಮನಿಸಿ: ನೀವು ಕಳುಹಿಸಿದ ಸಂದೇಶಗಳನ್ನು ಮಾತ್ರ ನೀವು ನೋಡುತ್ತೀರಿ)

ಸವಾರರ ಡೇಟಾ

ನಿಮ್ಮ ಸವಾರರ ಡೇಟಾ ನೀವು ತಲುಪಬೇಕಾದ ಸ್ಥಳಕ್ಕೆ ನಿಮ್ಮನ್ನು ತಲುಪಿಸಲು ಬಳಸುವ ಮಾಹಿತಿಯನ್ನು ಒಳಗೊಂಡಿದೆ, ಉದಾಹರಣೆಗೆ:

  • ಟ್ರಿಪ್ ಅನ್ನು ವಿನಂತಿಸಿದ, ಪ್ರಾರಂಭಿಸಿದ ಮತ್ತು ಕೊನೆಗೊಳಿಸಿದ ಸಮಯಗಳು ಹಾಗೂ ಸ್ಥಳಗಳು, ಜೊತೆಗೆ ಪ್ರಯಾಣಿಸಿದ ದೂರ
  • ಟ್ರಿಪ್ ಬೆಲೆಗಳು ಮತ್ತು ಕರೆನ್ಸಿ
  • ಸಾಧನ OS, ಸಾಧನದ ಮಾದರಿ, ಸಾಧನ ಭಾಷೆ, ಆ್ಯಪ್‌ ಆವೃತ್ತಿ ಹಾಗೂ ಮಾಹಿತಿಯನ್ನು ಸಂಗ್ರಹಿಸಲಾದ ಸಮಯ ಮತ್ತು ಸ್ಥಳದಂತಹ 30 ದಿನಗಳ ಮೊಬೈಲ್ ಈವೆಂಟ್ ಡೇಟಾ

Uber Eats ಮಾಹಿತಿ

ನಿಮ್ಮ Uber Eats ಮಾಹಿತಿಯು ಈ ಕೆಳಗಿನಂತಹ ಆರ್ಡರ್ ಇತಿಹಾಸದ ವಿವರಗಳನ್ನು ಒಳಗೊಂಡಿರುತ್ತದೆ:

  • ರೆಸ್ಟೋರೆಂಟ್ ಹೆಸರುಗಳು, ಆರ್ಡರ್ ಮಾಡಲಾದ ವಸ್ತುಗಳು, ಬೆಲೆಗಳು ಮತ್ತು ನೀವು ನಿಮ್ಮ ಆರ್ಡರ್ ನೀಡಿದ ಸಮಯ
  • ಗ್ರಾಹಕೀಕರಣಗಳು ಅಥವಾ ವಿಶೇಷ ಸೂಚನೆಗಳು
  • ಸಾಧನದ OS, ಸಾಧನದ ಮಾದರಿ, ಸಾಧನದ ಭಾಷೆ, ಆ್ಯಪ್‌ ಆವೃತ್ತಿ ಹಾಗೂ ಮಾಹಿತಿಯನ್ನು ಸಂಗ್ರಹಿಸಲಾದ ಸಮಯ ಮತ್ತು ಸ್ಥಳದಂತಹ 30 ದಿನಗಳ ಮೊಬೈಲ್ ಈವೆಂಟ್ ಮಾಹಿತಿ

ನಿಮ್ಮ ಡೌನ್‌ಲೋಡ್‌ ಯಾವ ಮಾಹಿತಿಯನ್ನು ಒಳಗೊಂಡಿರುವುದಿಲ್ಲವೆಂದರೆ?

ನಿಮ್ಮ ಮಾಹಿತಿ ಡೌನ್‌ಲೋಡ್‌ನಲ್ಲಿ ಕೆಲವು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿರುವುದಿಲ್ಲ. ಇದು ಭದ್ರತಾ ಕಾರಣಗಳಿಗಾಗಿರಬಹುದು ಅಥವಾ ಮಾಹಿತಿಯು ಸ್ವಾಮ್ಯತೆ ಉಳ್ಳದ್ದಾಗಿರಬಹುದು. ನಾವು ಸಕಾರಣವಾಗಿಯೇ ಹೊರಗಿಡಲು ಸಾಧ್ಯವಿಲ್ಲದ ಮತ್ತೊಬ್ಬ ಪಕ್ಷದ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವುದನ್ನು ಕೂಡಾ ನಾವು ಸೇರಿಸುವುದಿಲ್ಲ; ಉದಾಹರಣೆಗೆ, ಸಹಾಯ ಸೇವೆಗಳ ಟಿಕೆಟ್‌ಗಳಲ್ಲಿನ ವಿಷಯ, Uber ನೊಂದಿಗಿನ ಇಮೇಲ್ ವಿನಿಮಯಗಳು ಅಥವಾ ನೀವು ಸ್ವೀಕರಿಸಿದ ಸಂದೇಶಗಳನ್ನು ನಾವು ಸೇರಿಸುವುದಿಲ್ಲ.

ಪ್ರತಿ ಖಾತೆ ಮಾದರಿಗೆ ಡೌನ್‌ಲೋಡ್‌ನಲ್ಲಿ ಸೇರಿಸಲಾಗಿಲ್ಲದ ಮಾಹಿತಿಯ ವಿಧದ ಪಟ್ಟಿ ಕೆಳಗಿದೆ. ಜೊತೆಗೆ ಅದನ್ನು ಏಕೆ ಸೇರಿಸಲಾಗಿಲ್ಲ ಎನ್ನುವುದಕ್ಕೆ ಕಾರಣವನ್ನು ಸಹ ನೀಡಲಾಗಿದೆ.

ಖಾತೆಯ ಡೇಟಾ

ಸಾಮಾಜಿಕ ಭದ್ರತೆ ಸಂಖ್ಯೆ, ಮೈಲಿಂಗ್ ವಿಳಾಸ, ಮತ್ತು ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳಂತಹ ನೀವು ನಮಗೆ ಒದಗಿಸಿರುವ ತೀರಾ ವೈಯಕ್ತಿಕವಾದ ಡೇಟಾವನ್ನು ನಿಮ್ಮ ಡೌನ್‌ಲೋಡ್‌ನಲ್ಲಿ ಸೇರಿಸಲಾಗಿರುವುದಿಲ್ಲ. ನಿಮ್ಮ ವೈಯಕ್ತಿಕ ಸುರಕ್ಷತೆಗಾಗಿ ನಾವು ಈ ಡೇಟಾವನ್ನು ಹೊರಗಿಡುತ್ತೇವೆ. ನೀವು ಕಳುಹಿಸಿದ ಸಂದೇಶಗಳನ್ನು ಮಾತ್ರವೇ ನೀವು ಸ್ವೀಕರಿಸುತ್ತೀರಿ. ಸುರಕ್ಷತಾ ಕಾರಣಗಳಿಗಾಗಿ, ನೀವು ಸ್ವೀಕರಿಸಿದ ಸಂದೇಶಗಳನ್ನು ಸೇರಿಸಲಾಗಿಲ್ಲ.

ಮೊಬೈಲ್ ಈವೆಂಟ್ ಮಾಹಿತಿ

ಸಾಧನ OS, ಸಾಧನ ಮಾಡೆಲ್, ಸಾಧನ ಭಾಷೆ ಮತ್ತು ಆ್ಯಪ್ ಆವೃತ್ತಿಯಂತಹ ನಿಮ್ಮ ರಫ್ತಿನಲ್ಲಿ ಒಳಗೊಂಡಿರುವ ಮೊಬೈಲ್ ಈವೆಂಟ್ ಡೇಟಾ ನಿಮ್ಮ ಡೌನ್‌ಲೋಡ್‌ನ ಗಾತ್ರವನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ನಿಮ್ಮ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗ ಒದಗಿಸಲು ಅನುವು ಮಾಡುವುದಕ್ಕಾಗಿ ಹಿಂದಿನ 30 ದಿನಗಳಿಗೆ ಮಾತ್ರವೇ ಸೀಮಿತವಾಗಿರುತ್ತದೆ.

ಸವಾರರ ಡೇಟಾ

  • ತಾಂತ್ರಿಕ ಮತ್ತು ಕಾನೂನು ಮಿತಿಗಳ ಕಾರಣದಿಂದಾಗಿ, ನೀವು ಉಳಿಸಿದ ಸ್ಥಳಗಳ ಹೆಸರುಗಳು ಮತ್ತು ವಿಳಾಸಗಳನ್ನು ಸೇರಿಸಲಾಗಿಲ್ಲ.
  • ಸ್ವಾಮ್ಯದ ಕಾರಣಗಳಿಗಾಗಿ ಅಂದಾಜು ಆಗಮನದ ಸಮಯ, ಬೆಲೆ ನಿಗದಿ ಲೆಕ್ಕಾಚಾರಗಳು ಮತ್ತು ಮಾರ್ಕೆಟ್‌ಪ್ಲೇಸ್-ಚಾಲಿತ ಪ್ರಮೋಷನ್ ರಿಯಾಯಿತಿಗಳ ವಿವರಗಳಂತಹ ಮಾಹಿತಿಯನ್ನು ಡೌನ್‌ಲೋಡ್‌ನಲ್ಲಿ ಸೇರಿಸಲಾಗಿಲ್ಲ.

Uber Eats ಡೇಟಾ

  • ಸ್ವಾಮ್ಯದ ಕಾರಣಗಳಿಗಾಗಿ ಡೆಲಿವರಿ ಶುಲ್ಕ ಲೆಕ್ಕಾಚಾರಗಳು ಮತ್ತು ಪ್ರಮೋಷನ್‌ ಉದ್ದೇಶದ ರಿಯಾಯಿತಿ ವಿವರಗಳನ್ನು ಡೌನ್‌ಲೋಡ್‌ನಲ್ಲಿ ಸೇರಿಸಲಾಗಿಲ್ಲ.
  • ಸ್ವಾಮ್ಯದ ಕಾರಣಗಳಿಗಾಗಿ ಡೆಲಿವರಿ ಶುಲ್ಕ ಲೆಕ್ಕಾಚಾರಗಳು ಮತ್ತು ಪ್ರಮೋಷನ್‌ ಉದ್ದೇಶದ ರಿಯಾಯಿತಿ ವಿವರಗಳನ್ನು ಡೌನ್‌ಲೋಡ್‌ನಲ್ಲಿ ಸೇರಿಸಲಾಗಿಲ್ಲ.

ಚಾಲಕರ ಡೇಟಾ

ನಿಮ್ಮ ಡೌನ್‌ಲೋಡ್ ನಿಮ್ಮ ಚಾಲಕರ ಅನುಭವದ ಬಗ್ಗೆ ಬಹಳ ಸೀಮಿತ ಮಾಹಿತಿಯನ್ನು ಹೊಂದಿರಬಹುದು. ಚಾಲಕ ಡ್ಯಾಶ್‌ಬೋರ್ಡ್‌ನಲ್ಲಿ ಅಥವಾ ವಿನಂತಿಯನ್ನು ಸಲ್ಲಿಸುವ ಮೂಲಕ ನಿಮ್ಮ ಹೆಚ್ಚಿನ ಚಾಲಕ ಡೇಟಾ ಮತ್ತು ಮಾಹಿತಿಯನ್ನು ನೀವು ಕಾಣಬಹುದು.