ಆರ್ಡರ್‌ಗಾಗಿ ಇನ್‌ವಾಯ್ಸ್‌ ಅನ್ನು ವಿನಂತಿಸಲಾಗುತ್ತಿದೆ

ತೆರಿಗೆ ಉದ್ದೇಶಗಳಿಗಾಗಿ ಟ್ರಿಪ್ ಇನ್‌ವಾಯ್ಸ್‌ಗಳನ್ನು ಸ್ವೀಕರಿಸಲು, ನೀವು Uber ಜೊತೆಗೆ ತೆರಿಗೆ ಪ್ರೊಫೈಲ್ ಅನ್ನು ರಚಿಸಬೇಕಾಗುತ್ತದೆ. ಹಾಗೆ ಮಾಡುವ ಸಲುವಾಗಿ:

  1. riders.uber.com/tax-profiles ಗೆ ಹೋಗಿ.
  2. ನಿಮ್ಮ ತೆರಿಗೆ ಮಾಹಿತಿಯನ್ನು ನಮೂದಿಸಿ.
  3. "ಸಲ್ಲಿಸು" ಟ್ಯಾಪ್ ಮಾಡಿ. ನಂತರ ನೀವು ubereats.com ನಲ್ಲಿ ಪ್ರತಿ ಆರ್ಡರ್‌ಗೆ ಇನ್‌ವಾಯ್ಸ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ನೀವು ಒದಗಿಸುವ ಮಾಹಿತಿ:

  • ಕಾನೂನಾತ್ಮಕವಾಗಿ ಸರಿಯಾಗಿರಬೇಕು
  • ತೆರಿಗೆ ಅಧಿಕಾರಿಗಳಿಂದ ಅದು ಪರಿಶೀಲನೆಗೆ ಒಳಪಡಬಹುದು
  • ನಿಮ್ಮ ಇನ್‌ವಾಯ್ಸ್‌ಗಳಲ್ಲಿ ಕಾಣಸಿಗುತ್ತದೆ

ಇನ್‌ವಾಯ್ಸ್‌ಗಳನ್ನು ಡೌನ್‌ಲೋಡ್ ಮಾಡಲಾಗುತ್ತಿದೆ

ಸಾಪ್ತಾಹಿಕ ಇನ್‌ವಾಯ್ಸ್‌ಗಳನ್ನು ಅಕ್ಸೆಸ್ ಮಾಡಲು (ನಿಮ್ಮ ತೆರಿಗೆ ಪ್ರೊಫೈಲ್ ಅನ್ನು ರಚಿಸಿದ ನಂತರ):

  1. ubereats.com ಗೆ ಸೈನ್ ಇನ್ ಮಾಡಿ .
  2. ಮುಖ್ಯ ಮೆನು ತೆರೆಯಲು ಎಡಭಾಗದಲ್ಲಿರುವ ಮೆನು ಐಕಾನ್ ಅನ್ನು ಟ್ಯಾಪ್ ಮಾಡಿ.
  3. "ಆರ್ಡರ್‌ಗಳು" ಆಯ್ಕೆಮಾಡಿ ಮತ್ತು ನಿಮಗೆ ಇನ್‌ವಾಯ್ಸ್ ಅಗತ್ಯವಿರುವ ಆರ್ಡರ್ ಅನ್ನು ಹುಡುಕಿ.
  4. ಆ ಆರ್ಡರ್‌ನ ಇನ್‌ವಾಯ್ಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು “ಇನ್‌ವಾಯ್ಸ್ ಉಳಿಸಿ” ಆಯ್ಕೆಮಾಡಿ.

ಸಾರಾಂಶ ಇನ್‌ವಾಯ್ಸ್‌ ಮಾಹಿತಿಯನ್ನು ತಿದ್ದುಪಡಿ ಮಾಡಲಾಗುತ್ತಿದೆ

ಒಮ್ಮೆubereats.com ನಲ್ಲಿ ಇನ್‌ವಾಯ್ಸ್‌ಗಳು ಲಭ್ಯವಾದ ನಂತರ ಅವುಗಳನ್ನು ಮಾರ್ಪಡಿಸಲಾಗುವುದಿಲ್ಲ . ಇನ್‌ವಾಯ್ಸ್‌ನಲ್ಲಿ ಹೆಚ್ಚುವರಿ ವಿವರಗಳಿರಬೇಕೆಂದು ನೀವು ಬಯಸಿದಲ್ಲಿ, ಟ್ರಿಪ್‌ಗಳನ್ನು ಸ್ವೀಕರಿಸುವ ಮೊದಲು ನಿಮ್ಮ ಮಾಹಿತಿಯನ್ನು ನವೀಕರಿಸಿ:

  1. riders.uber.com/tax-profiles ಗೆ ಹೋಗಿ.
  2. ನಿಮ್ಮ ತೆರಿಗೆ ಮಾಹಿತಿಯನ್ನು ನವೀಕರಿಸಿ.
  3. "ಸಲ್ಲಿಸಿ" ಕ್ಲಿಕ್ ಮಾಡಿ.

ನಾನು ಇನ್‌ವಾಯ್ಸ್‌ ಅನ್ನು ನವೀಕರಿಸಬಹುದೇ?

ಇಲ್ಲ, ಇನ್‌ವಾಯ್ಸ್‌ಗಳನ್ನು ನೀವು ಒಮ್ಮೆ ಸ್ವೀಕರಿಸಿದ ನಂತರ ಅವುಗಳನ್ನು ನವೀಕರಿಸಲು ಆಗುವುದಿಲ್ಲ.

ನಾನು ಇನ್‌ವಾಯ್ಸ್‌ಗಳನ್ನು ಸ್ವೀಕರಿಸುತ್ತಿಲ್ಲ

ಒಂದು ವೇಳೆ ನಿಮಗೆ Uber ನಿಂದ ಟ್ರಿಪ್ ಇನ್‌ವಾಯ್ಸ್‌ಗಳನ್ನು ಸ್ವೀಕರಿಸಲು ಆಗದಿದ್ದಲ್ಲಿ, ನಿಮ್ಮ ತೆರಿಗೆ ಪ್ರೊಫೈಲ್ ಮಾಹಿತಿಯನ್ನು ಪರಿಶೀಲಿಸಿ:

  1. riders.uber.com/tax-profiles ಗೆ ಹೋಗಿ
  2. ನಿಮ್ಮ ತೆರಿಗೆ ಮಾಹಿತಿಯನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದಲ್ಲಿ ಅದನ್ನು ನವೀಕರಿಸಿ.
  3. "ಸಲ್ಲಿಸಿ" ಕ್ಲಿಕ್ ಮಾಡಿ.