ನನ್ನ ಆರ್ಡರ್ ಅನ್ನು ಏಕೆ ರದ್ದುಗೊಳಿಸಲಾಗಿದೆ?

ನಿಮ್ಮ ಆರ್ಡರ್ ಅನ್ನು ವ್ಯಾಪಾರಿ ಅಥವಾ ಡೆಲಿವರಿ ಪಾರ್ಟ್‌ನರ್‌ ರದ್ದು ಮಾಡಬಹುದು. ರದ್ದತಿಯ ಸಂದರ್ಭದಲ್ಲಿ, ನೀವು ಅದೇ ವ್ಯಾಪಾರಿಯಿಂದ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಆರ್ಡರ್ ಮಾಡಬಹುದು ಅಥವಾ ಮತ್ತೊಬ್ಬ ವ್ಯಾಪಾರಿಯಿಂದ ಆರ್ಡರ್ ಮಾಡಲು ಪ್ರಯತ್ನಿಸಬಹುದು.

. . .

ವ್ಯಾಪಾರಿಗಳು ಏಕೆ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಬಹುದು

ಅವರ ಬಳಿ ಐಟಂ ಮುಗಿದುಹೋದ್ದಲ್ಲಿ ಅಥವಾ ಅವರು ಈಗಾಗಲೇ ಹೆಚ್ಚಿನ ಪ್ರಮಾಣದ ಆರ್ಡರ್ ವಿನಂತಿಗಳನ್ನು ಸ್ವೀಕರಿಸಿದ್ದಲ್ಲಿ ಇದು ಸಂಭವಿಸುವ ಸಾಧ್ಯತೆ ಇರುತ್ತದೆ.

ವ್ಯಾಪಾರಿಯ ಬಳಿ ಐಟಂ ಖಾಲಿಯಾಗಿದ್ದರೆ, ನಿಮ್ಮ ಆರ್ಡರ್ ಸ್ವಯಂಚಾಲಿತವಾಗಿ ರದ್ದಾಗುವ ಮೊದಲು ಅದನ್ನು ಅಪ್‌ಡೇಟ್ ಮಾಡಲು ನಿಮಗೆ 10 ನಿಮಿಷಗಳ ಕಾಲಾವಕಾಶವನ್ನು ನೀಡಿರುವ ಸೂಚನೆ ಬರಬಹುದು.

ವ್ಯಾಪಾರಿಯು ನಿಮ್ಮ ಆರ್ಡರ್‌ ರದ್ದುಗೊಳಿಸಿದರೆ ನಿಮಗೆ ಶುಲ್ಕವನ್ನು ವಿಧಿಸಲಾಗುವುದಿಲ್ಲ.

. . .

ಡೆಲಿವರಿ ಪಾರ್ಟನರ್‌ ಏಕೆ ಆರ್ಡರ್‌ಗಳನ್ನು ರದ್ದುಗೊಳಿಸಬಹುದು

ಇದು ಸಂಭವಿಸಲು ಕೆಲವು ಸಂಭಾವ್ಯ ಕಾರಣಗಳಿವೆ:

1. ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲದೇ ಇರುವುದು

- ನಿಮ್ಮ ಡೆಲಿವರಿ ವಿಳಾಸಕ್ಕೆ ತಲುಪಿದಾಗ, ಡೆಲಿವರಿ ಪಾರ್ಟ್ನರ್‌ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಆರ್ಡರ್ ಬರುವ ನಿರೀಕ್ಷೆಯಿರುವಾಗ ನಿಮ್ಮ ಫೋನ್ ಅನ್ನು ಹತ್ತಿರ ಇಟ್ಟುಕೊಳ್ಳುವುದು ಉತ್ತಮ

- ಡೆಲಿವರಿ ಪಾರ್ಟ್‌ನರ್‌ ನಿಮ್ಮನ್ನು ಹುಡುಕಲು ಅಥವಾ ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಡೆಲಿವರಿಯನ್ನು ರದ್ದುಗೊಳಿಸುವ ಸಾಧ್ಯತೆ ಇರುತ್ತದೆ

- ಡೆಲಿವರಿ ಪಾರ್ಟ್‌ನರ್‌ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದೇ ಇದ್ದರೂ, ನೀವು ಸೂಚಿಸಿದ ಸ್ಥಳಕ್ಕೆ ಬಂದ ನಂತರ ನಿಮ್ಮನ್ನು ಸಂಪರ್ಕಿಸಲು ಸಮಂಜಸವಾದ ಪ್ರಯತ್ನವನ್ನು ಮಾಡಿದ್ದಲ್ಲಿ, ನೀವು ಮರುಪಾವತಿಗೆ ಅರ್ಹರಾಗಿರುವುದಿಲ್ಲ

2. ವ್ಯಾಪಾರವನ್ನು ಮುಚ್ಚಲಾಗಿತ್ತು

- ವ್ಯಾಪಾರಿಯ ಬಳಿ ಡೆಲಿವರಿ ಪಾರ್ಟ್‌ನರ್ ಬಂದಾಗ, ಅವರು ಅನಿರೀಕ್ಷಿತವಾಗಿ ಮುಚ್ಚಿರುವ ಸಾಧ್ಯತೆ ಇರುತ್ತದೆ

3. ನೀವು ವಿನಂತಿಸಿದ ಐಟಂಗಳು ಸ್ಟಾಕ್‌ ಇಲ್ಲದಿರುವ ಕಾರಣ ಆರ್ಡರ್ ಅನ್ನು ಪೂರೈಸಲು ಸಾಧ್ಯವಾಗದೇ ಇರಬಹುದು