ಶುಲ್ಕಗಳನ್ನು ಯಾವ ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ?

ದರಗಳನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗುತ್ತದೆ:

- ಮೂಲ ದರ (ಪಿಕಪ್‌ಗೆ ದರ)
- ಸಮಯ-ಆಧಾರಿತ ಸಂಪಾದನೆಗಳು (ಪ್ರತಿ-ನಿಮಿಷದ ದರದಂತೆ)
- ದೂರ ಆಧಾರಿತ ಸಂಪಾದನೆಗಳು (ಪ್ರತಿ-ಮೈಲಿಯ ದರದಂತೆ)
- ಸರ್ಜ್ ದರ (ಅನ್ವಯಿಸಿದಲ್ಲಿ)
- ಅನ್ವಯವಾಗುವ ಯಾವುದೇ ಟೋಲ್‌ಗಳು, ಶುಲ್ಕಗಳು ಮತ್ತು ಪ್ರೊಮೋಷನ್‌ಗಳು

ನಿಮ್ಮ ಮೂಲ ದರ, ಪ್ರತಿ ಮೈಲಿ ಹಾಗೂ ಪ್ರತಿ ನಿಮಿಷದ ದರಗಳು ನಿಮ್ಮ ನಗರದಲ್ಲಿನ ಕನಿಷ್ಠ ಟ್ರಿಪ್ ಸಂಪಾದನೆಗಳ ಮೊತ್ತಕ್ಕಿಂತ ಕಡಿಮೆಯಿದ್ದಲ್ಲಿ, ನೀವು "ಕನಿಷ್ಠ ದರ" ವನ್ನು ಸ್ವೀಕರಿಸುತ್ತೀರಿ. ಸಣ್ಣ ಟ್ರಿಪ್‌ಗಳಿಗಾಗಿ ನೀವು ಯಾವಾಗಲೂ ಕನಿಷ್ಠ ಮೊತ್ತವನ್ನು ಗಳಿಸುತ್ತೀರಿ ಎನ್ನುವುದನ್ನು ಇದು ಖಚಿತಪಡಿಸುತ್ತದೆ.

ಗಮನಿಸಿ: ಪ್ರತಿ ಟ್ರಿಪ್‌ಗೆ, ನೀವು Uber ಸೇವಾ ಶುಲ್ಕವನ್ನು ಹೊರತುಪಡಿಸಿ ಉಳಿದ ಶುಲ್ಕಗಳನ್ನು ಸ್ವೀಕರಿಸುತ್ತೀರಿ.

ಆ್ಯಪ್‌ನಲ್ಲಿ "ಸಂಪಾದನೆಗಳು" ಟ್ಯಾಬ್ ಅಡಿಯಲ್ಲಿ ನೀಡಲಾದ ಯಾವುದೇ ಟ್ರಿಪ್‌ಗಾಗಿ "ಟ್ರಿಪ್ ವಿವರಗಳು" ಪುಟದಲ್ಲಿ ಪ್ರತಿ ಟ್ರಿಪ್‌ನ ಸಂಪಾದನೆಗಳನ್ನು ನೀವು ವೀಕ್ಷಿಸಬಹುದು.

ನಗರ ಮತ್ತು ವಾಹನದ ವರ್ಗವನ್ನು ಅನುಸರಿಸಿ ದರಗಳು ಬದಲಾಗುತ್ತವೆ, ಆದರೆ ನಮ್ಮ ನಗರಗಳ ಪುಟದಲ್ಲಿ ನಿಮ್ಮ ನಗರದ ದರಗಳನ್ನು ನೀವು ವೀಕ್ಷಿಸಬಹುದು.

ಮುಂಗಡ ದರಗಳು

ಕೆಲವೊಮ್ಮೆ, ಸವಾರರಿಗೆ ಟ್ರಿಪ್‌ನ ಪ್ರಾರಂಭದಲ್ಲಿ ಮುಂಗಡ ದರ ಎಂದು ಕರೆಯಲ್ಪಡುವ ಉಲ್ಲೇಖಿಸಲಾದ ಅಂದಾಜು ದರವನ್ನು (ಅವರು ನಮೂದಿಸುವ ಪಿಕಪ್ ಮತ್ತು ಡ್ರಾಪ್-ಆಫ್ ಸ್ಥಳಗಳ ಆಧಾರದ ಮೇಲೆ) ತೋರಿಸಲಾಗುತ್ತದೆ.

ಮುಂಗಡ ಬೆಲೆಯು ಟ್ರಿಪ್‌ನ ನಿರೀಕ್ಷಿತ ಅವಧಿ ಮತ್ತು ದೂರ, ನಿರೀಕ್ಷಿತ ಟ್ರಾಫಿಕ್ ಮಾದರಿಗಳು ಹಾಗೂ ಅರಿವಿಗೆ ಬಂದಿರುವ ರಸ್ತೆ ಮುಚ್ಚುವಿಕೆಗಳು ಹಾಗೂ ಬೇಡಿಕೆ ಹೆಚ್ಚಿರುವಾಗ ಸರ್ಜ್‌ ಅನ್ನು ಕೂಡ ಗಣನೆಗೆ ತೆಗೆದುಕೊಳ್ಳುತ್ತದೆ. ಒಂದು ಟ್ರಿಪ್ ಟೋಲ್ ಮೂಲಕ ಹಾದು ಹೋದಲ್ಲಿ, ಸವಾರರು ಟ್ರಿಪ್‌ನ ಕೊನೆಯಲ್ಲಿ ನಿಮಗೆ ಟೋಲ್‌ನ ಸಂಪೂರ್ಣ ಮೊತ್ತವನ್ನು ಪಾವತಿಸುತ್ತಾರೆ. ಟ್ರಿಪ್ ನಿರೀಕ್ಷೆಗಿಂತ ಗಮನಾರ್ಹವಾಗಿ ಭಿನ್ನವಾಗಿದ್ದಲ್ಲಿ ಮುಂಗಡ ದರವು ಬದಲಾವಣೆಗೆ ಒಳಪಟ್ಟಿರುತ್ತದೆ.

ಕೆಲವು ಟ್ರಿಪ್‌ಗಳು ಯೋಜಿಸಿದ್ದಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿ ಕೊನೆಗೊಳ್ಳುವ ಸಾಧ್ಯತೆ ಇರುತ್ತದೆ. ಇದು ಕಾಲಕಾಲಕ್ಕೆ ಸಂಭವಿಸುತ್ತದೆ ಎನ್ನುವುದು ನಮಗೆ ತಿಳಿದಿದೆ. ಈ ಸಂದರ್ಭಗಳಲ್ಲಿ, ಮುಂಗಡ ದರ ಅನ್ವಯಿಸುವುದಿಲ್ಲ ಹಾಗೂ ಸರಿಯಾದ ಸಮಯ ಮತ್ತು ದೂರದ ಮೇಲೆ ನಿಜವಾದ ದರವನ್ನು ಲೆಕ್ಕಹಾಕಲಾಗುತ್ತದೆ. ಇದು ಈ ಕೆಳಗಿನ ಯಾವುದೇ ಸಂದರ್ಭಗಳಲ್ಲಿ ಸಂಭವಿಸಬಹುದು;

  • ನೀವು ಅನಿರೀಕ್ಷಿತ ವಾಹನ ದಟ್ಟಣೆಯನ್ನು ಎದುರಿಸುತ್ತೀರಿ ಹಾಗೂ ಟ್ರಿಪ್ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ
  • ನೀವು ಟ್ರಿಪ್ ಅನ್ನು ಗಣನೀಯವಾಗಿ ದೀರ್ಘ ಮತ್ತು ನಿಧಾನವಾಗಿ ಮಾಡುವ ಮಾರ್ಗವನ್ನು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ
  • ತಲುಪಬೇಕಾದ ಸ್ಥಳವು ಆರಂಭದಲ್ಲಿ ವಿನಂತಿಸಿದ ಗಮ್ಯಸ್ಥಾನಕ್ಕಿಂತ ಗಮನಾರ್ಹವಾಗಿ ದೂರ ಅಥವಾ ಹತ್ತಿರದಲ್ಲಿದ್ದಲ್ಲಿ
  • ಅಥವಾ ಸವಾರರು ತಮ್ಮಆ್ಯಪ್‌ನಲ್ಲಿ ನಿಲುಗಡೆಗಳನ್ನು ಸೇರಿಸಿದಲ್ಲಿ ಅಥವಾ ತೆಗೆದುಹಾಕಿದಲ್ಲಿ

ನಿಮ್ಮ ಟ್ರಿಪ್ ಶುಲ್ಕವನ್ನು ನಿಖರವಾಗಿ ಲೆಕ್ಕಹಾಕಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು,

  • GPS ಅನ್ನು ಅನುಸರಿಸಿ
  • ಸವಾರರು ತಮ್ಮ ಆ್ಯಪ್‌ನಲ್ಲಿ ಸರಿಯಾದ ಪಿಕಪ್ & ಡ್ರಾಪ್‌ಆಫ್ ಸ್ಥಳಗಳನ್ನು ಸೇರಿಸಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ
  • ಆ್ಯಪ್‌ನಲ್ಲಿ (ಇಲ್ಲಿ ವಿವರಿಸಿರುವ ಹಂತಗಳನ್ನು ಅನುಸರಿಸುವ ಮೂಲಕ ) ಟ್ರಿಪ್ ಸಮಯದಲ್ಲಿ ಅವರು ಬಯಸುವ ಯಾವುದೇ ಹೆಚ್ಚುವರಿ ನಿಲುಗಡೆಗಳನ್ನು ಸೇರಿಸಲು ಸವಾರರಿಗೆ ನೆನಪಿಸುವುದನ್ನು ಖಚಿತಪಡಿಸಿಕೊಳ್ಳಿ.