ಪ್ಯಾಕೇಜ್ ಡೆಲಿವರಿ ಬಗ್ಗೆ ಆಗಾಗ ಕೇಳಲ್ಪಡುವ ಪ್ರಶ್ನೆಗಳು

Uber ಕನೆಕ್ಟ್ ಎಂದರೇನು?

ನಿಗದಿತ ಡ್ರಾಪ್ ಆಫ್ ಮಾಡುವ ಸ್ಥಳದಲ್ಲಿ ಕಾಯುತ್ತಿರುವ ವ್ಯಕ್ತಿಗೆ ನಿಮ್ಮ ಪ್ಯಾಕೇಜ್(ಗಳನ್ನು) ಸಾಗಿಸುವ ಸಲುವಾಗಿ ಚಾಲಕರಿಗೆ ವಿನಂತಿಸಲು ನಿಮಗೆ Uber ಕನೆಕ್ಟ್ ಅನುಮತಿಯನ್ನು ನೀಡುತ್ತದೆ.

ನಾನು ಏನನ್ನು ಕಳುಹಿಸಬಹುದು?

ವಾಹನದ ಮೂಲಕ ಡೆಲಿವರಿ ಮಾಡಿದ ಪ್ಯಾಕೇಜ್‌ಗಳಿಗಾಗಿ, ನೀವು ಸಣ್ಣ ಅಥವಾ ಮಧ್ಯಮ ಪ್ಯಾಕೇಜ್‌ಗಳನ್ನು ಕಳುಹಿಸಬಹುದು. ಅವುಗಳೆಂದರೆ:

  • ಯಾವುದೇ ನಿಷೇಧಿತ ವಸ್ತುಗಳನ್ನು ಹೊಂದಿಲ್ಲದಿದ್ದಲ್ಲಿ (ಕೆಳಗಿನ ನಿಷೇಧಿತ ವಸ್ತುಗಳ ಪಟ್ಟಿಯನ್ನು ನೋಡಿ)
  • ಡೆಲಿವರಿಗಾಗಿ ನಿರ್ಬಂಧಿತ ತೂಕ ಅಥವಾ ಮೌಲ್ಯವನ್ನು ಮೀರದಿರುವುದು
  • ಮಧ್ಯಮ ಗಾತ್ರದ ವಾಹನದ ಡಿಕ್ಕಿಯಲ್ಲಿ ಆರಾಮವಾಗಿ ಹಿಡಿಸುವಂತಹುದು
  • ಮುಚ್ಚಲಾಗಿದ್ದು, ಸುರಕ್ಷಿತವಾಗಿ ಸೀಲ್ ಮಾಡಲಾಗಿದ್ದು ಮತ್ತು ಪಿಕಪ್‌ಗೆ ಸಿದ್ಧವಾಗಿರುವುದು

ಬೈಕ್ ಅಥವಾ ಸ್ಕೂಟರ್ ಮೂಲಕ ಡೆಲಿವರಿ ಮಾಡಬಹುದಾದ ಪ್ಯಾಕೇಜ್‌ಗಳಿಗಾಗಿ, ನೀವು ಸಣ್ಣ ಅಥವಾ ಮಧ್ಯಮ ಪ್ಯಾಕೇಜ್‌ಗಳನ್ನು ಕಳುಹಿಸಬಹುದು. ಅವುಗಳೆಂದರೆ:

  • ಯಾವುದೇ ನಿಷೇಧಿತ ವಸ್ತುಗಳನ್ನು ಹೊಂದಿಲ್ಲದಿದ್ದಲ್ಲಿ (ಕೆಳಗಿನ ನಿಷೇಧಿತ ವಸ್ತುಗಳ ಪಟ್ಟಿಯನ್ನು ನೋಡಿ)
  • ಒಟ್ಟು ಗರಿಷ್ಠ ತೂಕ 15 ಪೌಂಡ್ ಮತ್ತು ಸಂಯೋಜಿತ ಗರಿಷ್ಠ ಮೌಲ್ಯ $ 100 ಮೀರದಿರುವುದು
  • ಬ್ಯಾಕ್‌ಪ್ಯಾಕ್‌ನಲ್ಲಿ ಆರಾಮವಾಗಿ ಹೊಂದಿಕೊಳ್ಳುವಂತಹುದು
  • ಮುಚ್ಚಲಾಗಿದ್ದು, ಸುರಕ್ಷಿತವಾಗಿ ಸೀಲ್ ಮಾಡಲಾಗಿದ್ದು ಮತ್ತು ಪಿಕಪ್‌ಗೆ ಸಿದ್ಧವಾಗಿರುವುದು

ನಿಷೇಧಿತ ವಸ್ತುಗಳು

ನಿಮ್ಮ ಒಪ್ಪಂದದಲ್ಲಿ ನಿರ್ದಿಷ್ಟಪಡಿಸದ ಹೊರತು, ನಿಷೇಧಿತ ವಸ್ತುಗಳು ಇವುಗಳನ್ನು ಒಳಗೊಂಡಿರಬಹುದು. ಆದರೆ ಇದಕ್ಕೆ ಸೀಮಿತವಾಗಿಲ್ಲದಿರಬಹುದು:

  • ಮದ್ಯ
  • ಪ್ರಾಣಿಗಳು
  • ಬಂದೂಕುಗಳು
  • ಒಡೆಯಬಹುದಾದ ವಸ್ತುಗಳು
  • ಹಣ/ಉಡುಗೊರೆ ಕಾರ್ಡ್‌ಗಳು/ಇತ್ಯಾದಿ.
  • ಉತ್ತೇಜನ ನೀಡುವ ಔಷಧಗಳು

ನಿಮ್ಮ ಪ್ಯಾಕೇಜ್ನಿಷೇಧಿತ ಐಟಂ ಅನ್ನು ಹೊಂದಿದ್ದಲ್ಲಿ ಅಥವಾ ಮೇಲಿನ ನಿರ್ಬಂಧಗಳನ್ನು ಅನುಸರಿಸದಿದ್ದಲ್ಲಿ, ಚಾಲಕರು ನಿಮ್ಮ ವಿನಂತಿಯನ್ನು ರದ್ದುಗೊಳಿಸಬಹುದು.

ಯಾವ ರೀತಿಯಲ್ಲಿ ಡೆಲಿವರಿಗೆ ವಿನಂತಿ ಮಾಡುವುದು

ಡೆಲಿವರಿಯನ್ನು ವಿನಂತಿಸಲು:

  1. Uber ಆ್ಯಪ್‌ನಲ್ಲಿ ಪ್ಯಾಕೇಜ್ ಐಕಾನ್ ಅನ್ನು ಟ್ಯಾಪ್ ಮಾಡಿ.
  2. "ಪ್ಯಾಕೇಜ್ ಕಳುಹಿಸಿ" ಅಥವಾ "ಪ್ಯಾಕೇಜ್ ಸ್ವೀಕರಿಸಿ" ಆಯ್ಕೆಮಾಡಿ ಮತ್ತು ಕಳುಹಿಸುವವರು ಅಥವಾ ಸ್ವೀಕರಿಸುವವರ ಮಾಹಿತಿಯನ್ನು ನಮೂದಿಸಿ. ಈ ಮಾಹಿತಿಯನ್ನು ಯಾವಾಗಲೂ ತುಂಬಲು ಮರೆಯದಿರಿ. ಇದರಿಂದ ನೀವು ಡೆಲಿವರಿ ಪಿನ್ ಅನ್ನು ಸಕ್ರಿಯಗೊಳಿಸಬಹುದು.
  3. "ಸಂಪರ್ಕವನ್ನು ಆಯ್ಕೆ ಮಾಡಿ" ಟ್ಯಾಪ್ ಮಾಡಿ.
  4. ಪ್ಯಾಕೇಜ್ ಮಾರ್ಗಸೂಚಿಗಳನ್ನು ಪರಿಶೀಲಿಸಿ ಮತ್ತು "ಅರ್ಥವಾಯಿತು" ಆಯ್ಕೆಮಾಡಿ.
  5. ಡೆಲಿವರಿ ವಿವರಗಳನ್ನು ಪರಿಶೀಲಿಸಿ, ಡೆಲಿವರಿ ಆಯ್ಕೆಗಳನ್ನು ಆರಿಸಿ ಹಾಗೂ ವಿಶೇಷ ಸೂಚನೆಗಳನ್ನು ಸೇರಿಸಿ.
  6. ನಿಮ್ಮ ಡೆಲಿವರಿ ವಿನಂತಿಯನ್ನು ದೃಢೀಕರಿಸಿ.

ಡೆಲಿವರಿಗೆ ವಿನಂತಿಸಿದ ನಂತರ ನೀವು ಪಿಕಪ್ ಅಥವಾ ಡ್ರಾಪ್‌ಆಫ್ ವಿಳಾಸವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಡೆಲಿವರಿ ಪಿನ್ ಪ್ಯಾಕೇಜ್ ಅನ್ನು ತಲುಪಿಸಲಾಗಿದೆ ಎಂದು ಖಚಿತಪಡಿಸಲು ಸಹಾಯ ಮಾಡುವ ಒಂದು ಮಾರ್ಗವಾಗಿದೆ. ಆದರೆ, ಪಿನ್ ಅನ್ನು ಸಂಗ್ರಹಿಸಲು ಸಾಧ್ಯವಾಗದ ಸಂದರ್ಭಗಳು ಇರಬಹುದು. ನೀವು ಡೆಲಿವರಿ ಪಿನ್ ಅನ್ನು ಸಕ್ರಿಯಗೊಳಿಸಿದಲ್ಲಿ, ಇದು ನಿಮ್ಮ ಆ್ಯಪ್‌ನಲ್ಲಿ ಗೋಚರಿಸುತ್ತದೆ ಮತ್ತು ಐಟಂ ಅನ್ನು ಸ್ವೀಕರಿಸುವ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ಸ್ವೀಕರಿಸುವವರು ಡೆಲಿವರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು ಹಾಗೂ ಚಾಲಕನೊಂದಿಗೆ PIN ಅನ್ನು ಹಂಚಿಕೊಳ್ಳಬೇಕು.

ಡೆಲಿವರಿಯ ಸಮಯದಲ್ಲಿ ನಿಮ್ಮ ಪ್ಯಾಕೇಜ್ ಹಾಳಾಗಿದ್ದಲ್ಲಿ ಹಾಗೂ ನೀವು ಡೆಲಿವರಿ ವೆಚ್ಚವನ್ನು ಮರುಪಾವತಿ ಪಡೆಯಲು ಬಯಸಿದಲ್ಲಿ, ನೀವು ಡೆಲಿವರಿ ದಿನಾಂಕದ ನಂತರ ಮೂರು ವ್ಯವಹಾರ ದಿನಗಳಲ್ಲಿ ಫೋಟೋ ಸಹಿತ ಆಗಿರುವ ಹಾನಿಯ ವಿವರಣೆಯನ್ನು ಸಲ್ಲಿಸಬೇಕು.

ಪ್ಯಾಕೇಜ್‌ಗಳಿಗೆ Uber ವಿಮೆಯನ್ನು ನಿರ್ವಹಿಸುವುದಿಲ್ಲ.

ಸಂಪೂರ್ಣ ವಿವರಗಳಿಗಾಗಿ ದಯವಿಟ್ಟು ನಿಯಮಗಳು ಮತ್ತು ಷರತ್ತುಗಳನ್ನು ನೋಡಿ. ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಯಾದಲ್ಲಿ ಸೂಚನೆ ಇಲ್ಲದೆ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.

ನಾನು ಯಾರಿಗಾದರೂ ಒಂದು ಪ್ಯಾಕೇಜ್ ಅನ್ನು ಅಚ್ಚರಿಯ ರೂಪದಲ್ಲಿ ಕಳುಹಿಸಬಹುದೇ?

ಡೆಲಿವರಿ ಸ್ವೀಕೃತಿದಾರರಿಗೆ ನೀವು ಸೂಚಿಸುವಂತೆ ನಾವು ಶಿಫಾರಸು ಮಾಡುತ್ತೇವೆ. ಆದ್ದರಿಂದ, ಅವರು ವಾಹನದಿಂದ ಪ್ಯಾಕೇಜ್ ಅನ್ನು ಹಿಂಪಡೆಯಲು ಅವರು ಚಾಲಕರನ್ನು ಕರ್ಬ್‌ನಲ್ಲಿ ಭೇಟಿ ಮಾಡಬಹುದು.

ನೀವು ಯಾರಿಗಾದರೂ ಅನಿರೀಕ್ಷಿತವಾಗಿ ಪ್ಯಾಕೇಜ್ ಅನ್ನು ಕಳುಹಿಸಿದಲ್ಲಿ, Uber ಆ್ಯಪ್‌ನ ಸಂದೇಶ ವಿಭಾಗದಲ್ಲಿ, ಪ್ಯಾಕೇಜ್ ಅನ್ನು ಸ್ವೀಕರಿಸುವವರ ಬಾಗಿಲ ಬಳಿ ಬಿಡಲು ನೀವು ಚಾಲಕರಿಗೆ ಸ್ಪಷ್ಟವಾಗಿ ಸೂಚಿಸಬೇಕಾಗುತ್ತದೆ. ಚಾಲಕರು ಯಾವಾಗ ಬೇಕಾದರೂ ಈ ವಿನಂತಿಯನ್ನು ತಿರಸ್ಕರಿಸಬಹುದು.