ನಮ್ಮನ್ನು ಸಂಪರ್ಕಿಸುವ ಮೊದಲು ಗಮನಿಸಬೇಕಾದ ಕೆಲವು ವಿಷಯಗಳು ಹೀಗಿವೆ:
ನಿಮ್ಮ ಪ್ಯಾಕೇಜ್ ನಿಮಗೆ ಇನ್ನೂ ತಲುಪಿರದಿದ್ದಲ್ಲಿ ನೀವು ಆ್ಯಪ್ನಲ್ಲಿ ಚಾಲಕರಿಗೆ ಕರೆ ಮಾಡಬಹುದು ಅಥವಾ ಸಂದೇಶವನ್ನು ಕಳುಹಿಸಬಹುದು.
ಚಾಲಕರು ಯಾವುದೇ ಕಾರಣಕ್ಕಾಗಿ ನಿಮ್ಮ ವಿನಂತಿಯನ್ನು ರದ್ದುಮಾಡಲು ಸ್ವತಂತ್ರರು, ಉದಾಹರಣೆಗೆ, ನಿಮ್ಮ ಪ್ಯಾಕೇಜ್ ತುಂಬಾ ಭಾರವಾಗಿದ್ದಲ್ಲಿ, ಅವರ ವಾಹನಕ್ಕೆ ಹಿಡಿಸಲಾಗದಷ್ಟು ದೊಡ್ಡದಾಗಿದ್ದಲ್ಲಿ, ಸುರಕ್ಷಿತವಾಗಿ ಪ್ಯಾಕೇಜ್ ಮಾಡಿರದಿದ್ದಲ್ಲಿ ಅಥವಾ ನಿಷೇಧಿತ ಐಟಂ ಅನ್ನು ಹೊಂದಿದ್ದಲ್ಲಿ.
ಪ್ಯಾಕೇಜ್ ಸ್ವೀಕರಿಸುವ ವ್ಯಕ್ತಿಯು ಲಭ್ಯವಿಲ್ಲದಿದ್ದಲ್ಲಿ, ಸಮಸ್ಯೆಯನ್ನು ಪರಿಹರಿಸಲು ಅಥವಾ ಹಿಂತಿರುಗಿಸುವಿಕೆಯನ್ನು ಸಂಘಟಿಸುವ ಸಲುವಾಗಿ ಚಾಲಕರು ಆ್ಯಪ್ನಲ್ಲಿ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಬಹುದು. ಅಗತ್ಯವಿದ್ದಲ್ಲಿ ನಿಮಗೆ ಪ್ಯಾಕೇಜ್ ಹಿಂತಿರುಗಿಸಲಾಗುವ ವೆಚ್ಚಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ.
ಡೆಲಿವರಿಯ ಸಮಯದಲ್ಲಿ ನಿಮ್ಮ ಪ್ಯಾಕೇಜ್ ಹಾಳಾಗಿದ್ದಲ್ಲಿ ಹಾಗೂ ನೀವು ಡೆಲಿವರಿ ವೆಚ್ಚವನ್ನು ಮರುಪಾವತಿ ಪಡೆಯಲು ಬಯಸಿದಲ್ಲಿ, ನೀವು ಡೆಲಿವರಿ ದಿನಾಂಕದ ನಂತರ ಮೂರು ವ್ಯವಹಾರ ದಿನಗಳಲ್ಲಿ ಫೋಟೋ ಸಹಿತ ಆಗಿರುವ ಹಾನಿಯ ಬಗ್ಗೆ ವಿವರಣೆಯನ್ನು ಸಲ್ಲಿಸಬೇಕಾಗುತ್ತದೆ. ಪ್ಯಾಕೇಜ್ಗಳಿಗೆ Uber ವಿಮೆಯನ್ನು ನಿರ್ವಹಿಸುವುದಿಲ್ಲ.