ಓರ್ವ ಉದ್ಯೋಗಿಯಾಗಿ Uber for Business ಬಳಸುವುದು

ನಿಮ್ಮ ಪ್ರಸ್ತುತ Uber ರೈಡರ್ ಅಕೌಂಟ್‌ನೊಂದಿಗೆ ಬ್ಯುಸಿನೆಸ್‌ಗಾಗಿ Uber ಕಾರ್ಯನಿರ್ವಹಿಸುತ್ತದೆ, ನೀವು ಪ್ರಯಾಣಿಸಲು ಬಯಸುವ ಸೂಕ್ತವಾದ ಪ್ರೊಫೈಲ್ ಅನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಪ್ರಯಾಣವನ್ನು ವೈಯಕ್ತಿಕ, ಬ್ಯುಸಿನೆಸ್ ಅಥವಾ ಇತರ ಉದ್ದೇಶಗಳಿಗಾಗಿ ಪ್ರತ್ಯೇಕಿಸಲು ಅನುವು ಮಾಡಿಕೊಡುತ್ತದೆ.

ನಿಮ್ಮ ಕಂಪನಿಯ ಬ್ಯುಸಿನೆಸ್ ಖಾತೆಗೆ ನೀವು ಸೇರುತ್ತಿದ್ದರೆ, Uber ಖಾತೆಯನ್ನು ರಚಿಸುವ ಮೂಲಕ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ Uber ಖಾತೆಗೆ ಸೈನ್ ಇನ್ ಮಾಡುವ ಮೂಲಕ ನೀವು ಇಮೇಲ್ ಆಹ್ವಾನವನ್ನು ಸ್ವೀಕರಿಸುತ್ತೀರಿ. ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲೇಖನಕ್ಕೆ ಭೇಟಿ ನೀಡಿ.

ನಿಮ್ಮ ಕಂಪನಿಯ ಅಕೌಂಟ್ ಅಡ್ಮಿನ್ ಡ್ಯಾಶ್‌ಬೋರ್ಡ್‌ಗೆ ಪ್ರವೇಶ ಅವಕಾಶ ಹೊಂದಿದ್ದು ಅದು ಅಕೌಂಟ್‌ಗೆ ವಿಧಿಸಲಾದ ಟ್ರಿಪ್‌ಗಳ ಕುರಿತು ಈ ಕೆಳಗಿನ ಮಾಹಿತಿಯನ್ನು ಪ್ರದರ್ಶಿಸುತ್ತದೆ:

- ಪಿಕ್ ಅಪ್ ಲೊಕೇಶನ್ ಮತ್ತು ಡೆಸ್ಟಿನೇಶನ್
- ಆಯ್ದ ವೆಹಿಕಲ್ ಆಯ್ಕೆ
- ಟ್ರಿಪ್‌ನ ಪ್ರಾರಂಭ ಮತ್ತು ಅಂತ್ಯದ ದಿನಾಂಕ ಮತ್ತು ಸಮಯ
ಟ್ರಿಪ್ ಅವಧಿ
- ಅನ್ವಯಿಸಿದ ಖರ್ಚು ಕೋಡ್ (ಅನ್ವಯಿಸುವಂತಿದ್ದರೆ)

ಗಮನಿಸಿ: ಕಂಪನಿಯ ಅಡ್ಮಿನ್ ನಿಮ್ಮ ವೈಯಕ್ತಿಕ ಪ್ರೊಫೈಲ್‌ನಲ್ಲಿ ಮಾಡಿದ ಟ್ರಿಪ್‌ಗಳ ವಿವರಗಳನ್ನು ಯಾವತ್ತೂ ನೋಡುವುದಿಲ್ಲ.

ಪ್ರತಿ ಬಾರಿ ನಿಮ್ಮ ಕಂಪನಿಯ ಬ್ಯುಸಿನೆಸ್‌ಗಾಗಿ Uber ಅಕೌಂಟ್ ಬಳಸಿಕೊಂಡು ನೀವು ಟ್ರಿಪ್ ಕೈಗೊಳ್ಳುವಾಗ, ನೀವು ಖರ್ಚು ಕೋಡ್ ಮತ್ತು ಮೆಮೊವನ್ನು ನಮೂದಿಸಬೇಕಾಗಬಹುದು (ಒಂದು ವೇಳೆ ಅಡ್ಮಿನ್ ಹಾಗೆ ಮಾಡಲು ನಿಯಮಗಳನ್ನು ನಿಗದಿಪಡಿಸಿದರೆ).

ಖರ್ಚು ಕೋಡ್‌‍ಗಳು ಮತ್ತು ಮೆಮೊಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಕೆಳಗಿನ ಲೇಖನವನ್ನು ನೋಡಿ.

ಅಕೌಂಟ್ ಅನ್ನು ಬಳಸುವಾಗ ನಿಮಗೆ ಏನಾದರೂ ಪ್ರಶ್ನೆಗಳು ಎದುರಾದರೆ, ದಯವಿಟ್ಟು ಕಂಪನಿಯ ಅಡ್ಮಿನ್ ಅನ್ನು ಸಂಪರ್ಕಿಸಿ.

ನೀವು Uber ಗೆ ಹೊಸಬರಾಗಿದ್ದರೆ, ಆಪ್‌ ಬಳಸುವ ಕುರಿತ ಟಿಪ್ಸ್‌ಗಾಗಿ ಕೆಳಗಿನ ಸಹಾಯ ವಿಭಾಗಕ್ಕೆ ಭೇಟಿ ನೀಡಿ.