ನನ್ನ ಪಾವತಿಯನ್ನು ಏಕೆ ನಿರಾಕರಿಸಲಾಗಿದೆ?

ನಿಮ್ಮ ಆ್ಯಪ್‌ನಲ್ಲಿ ಈ ಕೆಳಗಿನ ಯಾವುದೇ ದೋಷ ಸಂದೇಶಗಳನ್ನು ನೀವು ನೋಡಿದಲ್ಲಿ, ನಿಮ್ಮ ಪಾವತಿ ವಿಧಾನವನ್ನು ನೀವು ಪರಿಷ್ಕರಿಸುವವರೆಗೆ ನಿಮಗೆ ಸವಾರಿಗಾಗಿ ವಿನಂತಿಸಲು ಸಾಧ್ಯವಾಗುವುದಿಲ್ಲ:

  • "ವಿನಂತಿ ವಿಫಲವಾಗಿದೆ: ಕಾರ್ಡ್ ನಿರಾಕರಿಸಲಾಗಿದೆ"
  • "ನಿಮ್ಮ ಪಾವತಿ ವಿಧಾನವು ಅಮಾನ್ಯವಾಗಿದೆ. ದಯವಿಟ್ಟು ನಿಮ್ಮ ಬಿಲ್ಲಿಂಗ್ ಸೆಟ್ಟಿಂಗ್ಸ್" ಅನ್ನು ನವೀಕರಿಸಿ."
  • ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸುವಾಗ ದೋಷ ಕಂಡುಬಂದಿದೆ

ಕೆಳಗಿನ ಒಂದು ಕಾರಣಕ್ಕಾಗಿ ನಿಮ್ಮ ಪಾವತಿ ವಿಧಾನವನ್ನು ತಿರಸ್ಕರಿಸಿದ್ದಲ್ಲಿ ಆ್ಯಪ್‌ ಮೆನುವಿನ ಪಾವತಿ ವಿಭಾಗದಲ್ಲಿ ಪರಿಷ್ಕರಿಸಿ ಅಥವಾ ಹೊಸ ಪಾವತಿ ವಿಧಾನವನ್ನು ಸೇರಿಸಿ:

  • ನಮೂದಿಸಿದ ಕಾರ್ಡ್ ಸಂಖ್ಯೆ ತಪ್ಪಾಗಿದೆ
  • ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ
  • ಖಾತೆಯಲ್ಲಿ ಸಾಕಷ್ಟು ಹಣದ ಮೊತ್ತವಿಲ್ಲ

ಕೆಳಗಿನ ಸಂದರ್ಭಗಳಲ್ಲಿ ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗಬಹುದು:

  • ನೀವು ವಿದೇಶಕ್ಕೆ ಪ್ರಯಾಣಿಸುತ್ತಿದ್ದೀರಿ ಮತ್ತು ಅಂತರಾಷ್ಟ್ರೀಯ ವಹಿವಾಟುಗಳನ್ನು ಅಧಿಕೃತಗೊಳಿಸಿಲ್ಲದಿದ್ದಲ್ಲಿ
  • ವಂಚನೆಯ ಆಧಾರದ ಮೇಲೆ Uber ನಿಂದ ಶುಲ್ಕವನ್ನು ಬ್ಯಾಂಕ್ ತಿರಸ್ಕರಿಸಿದಲ್ಲಿ
  • ನಿಮ್ಮ ಖಾತೆಯಲ್ಲಿ ನೀವು ಹಿಂಪಡೆಯುವ ಮಿತಿಯನ್ನು ಮೀರಿದ್ದಲ್ಲಿ
  • ನಿಮ್ಮ ಕಾರ್ಡ್ ಕಳೆದುಹೋಗಿದೆ ಅಥವಾ ಕಳ್ಳತನವಾಗಿದೆ ಎಂದು ನೀವು ವರದಿ ಮಾಡಿದ್ದಲ್ಲಿ

ನೀವು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಸಹಾಯದ ಅಗತ್ಯವಿದ್ದರೆ, ದಯವಿಟ್ಟು ಕೆಳಗೆ ನಮ್ಮನ್ನು ಸಂಪರ್ಕಿಸಿ.