ಬೇರೊಬ್ಬರು ನನ್ನ ಪರವಾಗಿ ಸವಾರಿಯನ್ನು ಬುಕ್ ಮಾಡಿದ್ದಾರೆ

ನಾನು ಕಾದಿರಿಸದ ಸವಾರಿಗಾಗಿ ನನಗೆ ಏಕೆ ನೋಟಿಫಿಕೇಷನ್ ಬಂದಿದೆ?

ದಾರಿಯಲ್ಲಿ ನೀವು Uber ನೊಂದಿಗೆ ಸವಾರಿ ಮಾಡುತ್ತಿದ್ದೀರಿ ಎನ್ನುವ ಪಠ್ಯ ಸಂದೇಶವನ್ನು ಸ್ವೀಕರಿಸಿದ್ದಲ್ಲಿ, ನಿಮ್ಮ ಪರವಾಗಿ ಬೇರೆ ಯಾರಾದರೂ ಸವಾರಿಯನ್ನು ನಿಗದಿಪಡಿಸಿರಬಹುದು. ಸವಾರಿಯನ್ನು ಸ್ವೀಕರಿಸಲು ಮತ್ತು ನಿಮ್ಮ ಪಿಕಪ್ ವಿವರಗಳನ್ನು ವೀಕ್ಷಿಸಲು ಪಠ್ಯ ಸಂದೇಶದಲ್ಲಿನ ಸೂಚನೆಗಳನ್ನು ಅನುಸರಿಸಿ.

ಇತರರು ವಿನಂತಿಸಬಹುದಾದ ಸವಾರಿಗಳ ವಿಧಗಳು

ನಿಮಗಾಗಿ ಮೂರು ರೀತಿಯ ಟ್ರಿಪ್‌ಗಳನ್ನು ವಿನಂತಿಸಬಹುದು:

  • Uber for Business ಸಂಸ್ಥೆ ವಿನಂತಿಸಿದ ಸವಾರಿಗಳು
  • ಸಾರ್ವಜನಿಕ ಸಾರಿಗೆ ಸಂಸ್ಥೆಗಳು ವಿನಂತಿಸಿದ ಸವಾರಿಗಳು
  • ಸ್ನೇಹಿತರು ಅಥವಾ ಕುಟುಂಬದವರು ಕಾದಿರಿಸಿದ ಸವಾರಿಗಳು

Uber for Business ಸಂಸ್ಥೆ ವಿನಂತಿಸಿದ ಸವಾರಿಗಳು

Uber for Business ಸಂಸ್ಥೆ ನಿಮಗಾಗಿ ಸವಾರಿಯನ್ನು ವಿನಂತಿಸಿದಾಗ, ನೀವು ಇವುಗಳಲ್ಲಿ ಒಂದನ್ನು ಸ್ವೀಕರಿಸುತ್ತೀರಿ:

  • ನಿಮ್ಮ ಮೊಬೈಲ್ ಫೋನ್‌ಗೆ ಬರುವ ಒಂದು ಪಠ್ಯ ಸಂದೇಶ
  • ನಿಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ಸಂಖ್ಯೆಗೆ ಬರುವ ಸ್ವಯಂಚಾಲಿತ ಕರೆ
  • ಒಂದು Uber ಆ್ಯಪ್‌ ನೋಟಿಫಿಕೇಷನ್

ಸಾರ್ವಜನಿಕ ಸಾರಿಗೆ ಸಂಸ್ಥೆಗಳು ವಿನಂತಿಸಿದ ಸವಾರಿಗಳು

ಸಾರ್ವಜನಿಕ ಸಾರಿಗೆ ಸಂಸ್ಥೆಗಳು ನಿಮಗಾಗಿ Shuttle, UberX ಅಥವಾ Uber Pool ಅನ್ನು ಬುಕ್ ಮಾಡಬಹುದು. Uber ಆ್ಯಪ್‌ ನೈಜ-ಸಮಯದ ಸಾರಿಗೆ ಮಾಹಿತಿಯನ್ನು ಒದಗಿಸುತ್ತದೆ.

ಸಾರಿಗೆ ಮಾಹಿತಿ, ಬೆಲೆಗಳು, ಮಾರ್ಗಗಳು ಮತ್ತು ವೇಳಾಪಟ್ಟಿಗಳನ್ನು ಮೂರನೇ ಪಾರ್ಟಿಯು ಒದಗಿಸುತ್ತದೆ ಹಾಗೂ Uber ಅವುಗಳ ನಿಖರತೆಯ ಬಗ್ಗೆ ಖಾತರಿಯನ್ನು ನೀಡುವುದಿಲ್ಲ.

ಸ್ನೇಹಿತರು ಅಥವಾ ಕುಟುಂಬದವರು ಕಾದಿರಿಸಿದ ಸವಾರಿಗಳು

ನೀವು ಬೇರೆ ಸ್ಥಳದಲ್ಲಿದ್ದರೂ ಸಹ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ನಿಮಗಾಗಿ ಸವಾರಿಯನ್ನು ವಿನಂತಿಸಬಹುದು.

ನೀವು Uber ಖಾತೆಯನ್ನು ಹೊಂದಿಲ್ಲದಿದ್ದಲ್ಲಿ, ನಿಮ್ಮ ಚಾಲಕರು ಮತ್ತು ವಾಹನ ಮಾಹಿತಿ ಹಾಗೂ ನಿಮ್ಮ ಟ್ರಿಪ್‌ನ ಸೂಚನೆಗಳೊಂದಿಗೆ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.

ನೀವು Uber ಖಾತೆಯನ್ನು ಹೊಂದಿದ್ದಲ್ಲಿ, ನೀವು ಇದರೊಂದಿಗೆ Uber ಆ್ಯಪ್ ನೋಟಿಫಿಕೇಷನ್ ಅನ್ನು ಸ್ವೀಕರಿಸುತ್ತೀರಿ:

  • ಚಾಲಕರ ಬಗೆಗಿನ ವಿವರಗಳು
  • ವಾಹನದ ಬಗೆಗಿನ ವಿವರಗಳು
  • ನಿಮ್ಮ ಸವಾರಿಗಾಗಿ ನೈಜ-ಸಮಯದ ಟ್ರ್ಯಾಕಿಂಗ್

ಬೇರೊಬ್ಬರಿಗಾಗಿ ಸವಾರಿಯನ್ನು ಹೇಗೆ ವಿನಂತಿಸುವುದು ಎನ್ನುವುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಈ ಲೇಖನವನ್ನು ವೀಕ್ಷಿಸಿ.

ಬೇರೆಯವರು ನನಗಾಗಿ ವಿನಂತಿಸಿರುವ ಸವಾರಿಯನ್ನು ನಾನು ರದ್ದುಗೊಳಿಸಬಹುದೇ ಅಥವಾ ತಿದ್ದುಪಡಿ ಮಾಡಬಹುದೇ?

ನಿಮ್ಮ ಟ್ರಿಪ್ ಅನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ನೀವು ಬಯಸಿದಲ್ಲಿ, ದಯವಿಟ್ಟು ನಿಮ್ಮ ಸವಾರಿಯನ್ನು ವಿನಂತಿಸಿದ ವ್ಯಕ್ತಿಯನ್ನು ಸಂಪರ್ಕಿಸಿ.

ನನ್ನ ಸವಾರಿಯ ಬಗ್ಗೆ ನನಗೆ ಇರಬಹುದಾದ ಸುರಕ್ಷತೆಯ ಬಗೆಗಿನ ಕಳವಳವನ್ನು ನಾನು ಹೇಗೆ ವರದಿ ಮಾಡುವುದು?

Uber ಪ್ಲಾಟ್‌ಫಾರ್ಮ್ ಅನ್ನು ಬಳಸಲು ಚಾಲಕರು ಸೈನ್ ಅಪ್ ಮಾಡಿದಾಗ, ಅವರು ವೃತ್ತಿಗೆ ವಿರುದ್ಧವಾದ ನಡವಳಿಕೆ, ಅನುಚಿತ ದೈಹಿಕ ಸಂಪರ್ಕ ಅಥವಾ ವಾಗ್ದಾಳಿಯನ್ನು ನಿಷೇಧಿಸುವ ಬಗ್ಗೆ ಇರುವ ಸಮುದಾಯ ಮಾರ್ಗಸೂಚಿಗಳನ್ನು ಒಪ್ಪಿರುತ್ತಾರೆ.

ಚಾಲಕರು ಎಲ್ಲಾ ಸಮಯದಲ್ಲೂ ಸುರಕ್ಷಿತವಾಗಿ ವಾಹನಗಳನ್ನು ಚಲಾಯಿಸಬೇಕೆಂದು ನಾವು ಬಯಸುತ್ತೇವೆ. ನಿಮ್ಮ ಟ್ರಿಪ್ ಸಮಯದಲ್ಲಿ ನಿಮಗೆ ಅಸುರಕ್ಷತೆಯ ಭಾವನೆ ಮೂಡಿದ ರೀತಿಯ ಅನುಭವವಾಗಿದ್ದಲ್ಲಿ ದಯವಿಟ್ಟು ನಮಗೆ ತಿಳಿಸಲು ಕೆಳಗೆ ನಮೂದಿಸಿರುವ ಒಂದು ಸಮಸ್ಯೆಯನ್ನು ಆಯ್ಕೆಮಾಡಿ.

ನಿಮಗೆ ತಕ್ಷಣದ ಪೋಲಿಸ್ ಅಥವಾ ವೈದ್ಯಕೀಯ ಆರೈಕೆಯ ಅಗತ್ಯವಿದ್ದಲ್ಲಿ ಅಥವಾ ನಿಮ್ಮ ಚಾಲಕರು ಯಾವುದರದೋ ಪ್ರಭಾವದಲ್ಲಿದ್ದಾರೆ ಎಂದು ನೀವು ಭಾವಿಸಿದಲ್ಲಿ, ದಯವಿಟ್ಟು 911 ಕ್ಕೆ ಕರೆ ಮಾಡಿ. ಒಮ್ಮೆ ಎಲ್ಲಾ ವ್ಯಕ್ತಿಗಳು ಅಪಾಯದಿಂದ ಸುರಕ್ಷಿತವಾದ ನಂತರ ಮತ್ತು ಅಗತ್ಯ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ, Uber ಪ್ರತಿನಿಧಿಯೊಂದಿಗೆ ಮಾತನಾಡಲು ದಯವಿಟ್ಟು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಸುರಕ್ಷತೆ-ಸಂಬಂಧಿತ ಸಹಾಯದ ಅಗತ್ಯವಿರುವ ಬಳಕೆದಾರರಿಗೆ ಈ ಸಾಲು ಅನ್ವಯವಾಗುತ್ತದೆ ಎನ್ನುವುದನ್ನು ದಯವಿಟ್ಟು ಗಮನಿಸಿ.