Uber ನಲ್ಲಿ, ನಿಮ್ಮ ನಂಬಿಕೆಯನ್ನು ನಾವು ಗೌರವಿಸುತ್ತೇವೆ ಮತ್ತು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನಾವು ಹೇಗೆ ಸಹಾಯ ಮಾಡುತ್ತೇವೆ ಎನ್ನುವುದನ್ನು ಹಂಚಿಕೊಳ್ಳಲು ಬಯಸುತ್ತೇವೆ.
ಚಾಲಕರು ಎಂದಿಗೂ ಇವುಗಳನ್ನು ನೋಡುವುದಿಲ್ಲ:
ಹೆಚ್ಚಿನ ಮಾರುಕಟ್ಟೆಗಳಲ್ಲಿ ಚಾಲಕರು ಟ್ರಿಪ್ ಅನ್ನು ಸ್ವೀಕರಿಸುವ ಮೊದಲು ನಿಮ್ಮ ಅಂದಾಜು ಪಿಕಪ್ ಸ್ಥಳವನ್ನು ಮಾತ್ರವೇ ವೀಕ್ಷಿಸುತ್ತಾರೆ. ನಿಮ್ಮ ಟ್ರಿಪ್ ಮುಗಿದ ನಂತರ, ವಿಳಾಸದ ವಿವರಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಚಾಲಕರು ನಿಮ್ಮ ಪಿಕಪ್ ಮತ್ತು ಡ್ರಾಪ್ಆಫ್ನ ಅಂದಾಜು ಸ್ಥಳವನ್ನು ಮಾತ್ರವೇ ನೋಡಬಹುದು.
ನಿಮ್ಮ ಮಾರುಕಟ್ಟೆಯಲ್ಲಿನ ವಿಳಾಸ ರಚನೆಗಳು, ಸ್ಥಳೀಯ ನಿಯಮಗಳು ಮತ್ತು ಚಾಲಕ ನಿಷ್ಠೆ ಪ್ರೋಗ್ರಾಂಗಳ ಆಧಾರದ ಮೇಲೆ ಚಾಲಕರಿಗೆ ತೋರಿಸಲಾದ ಅಂದಾಜು ಪಿಕಪ್ ಮತ್ತು ಡ್ರಾಪ್ ಮಾಡುವ ಸ್ಥಳದ ಪ್ರಕಾರ ಬದಲಾಗುತ್ತದೆ. ಅಂದಾಜು ಸ್ಥಳ ಸ್ವರೂಪಗಳ ಕೆಲವು ಉದಾಹರಣೆಗಳಲ್ಲಿ ಇವುಗಳು ಸೇರಿವೆ: ಅಡ್ಡ-ರಸ್ತೆ, ರಸ್ತೆ ಹೆಸರು, ಆಸಕ್ತಿಯ ಸ್ಥಳ ಮತ್ತು ವಿಮಾನ ನಿಲ್ದಾಣದ ಪಿಕಪ್ಗಾಗಿ ನೀವು ಭೇಟಿ ಮಾಡಬೇಕಾದ ಟರ್ಮಿನಲ್ ಮತ್ತು ಡೋರ್ ಸಂಖ್ಯೆಯಂತಹ ವಿಶೇಷ ಸ್ವರೂಪಗಳು.
Uber ಆ್ಯಪ್ ಬಳಸಲು ನಿಮ್ಮ ಸಾಧನದ ಸ್ಥಳ ಸೇವೆಗಳನ್ನು ನೀವು ಆನ್ ಮಾಡುವ ಅಗತ್ಯವಿಲ್ಲ. ಆದಾಗ್ಯೂ, ನಿಮ್ಮ ಟ್ರಿಪ್ ವಿವರಗಳನ್ನು ವಿಶ್ವಾಸಾರ್ಹ ಸಂಪರ್ಕಗಳೊಂದಿಗೆ ಹಂಚಿಕೊಳ್ಳುವಂತಹ ಕೆಲವು ವೈಶಿಷ್ಟ್ಯಗಳಿಗೆ ಸ್ಥಳ ಮಾಹಿತಿಯು ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಇರುತ್ತದೆ.
ನೀವು ಸ್ಥಳ ಸೇವೆಗಳನ್ನು ಬಳಸದಿದ್ದಲ್ಲಿ, ಆ್ಯಪ್ನಲ್ಲಿ ನಿಮ್ಮ ಪಿಕಪ್ ಮತ್ತು ಡ್ರಾಪ್ ಮಾಡುವ ಸ್ಥಳಗಳನ್ನು ಕೈಯಾರೆ ನಮೂದಿಸುವ ಮೂಲಕ ನೀವು ಈಗಲೂ Uber ಅನ್ನು ಬಳಸಬಹುದು. ನೀವು ವಿಳಾಸದ ಬದಲು ಅಡ್ಡ ಬೀದಿಗಳು ಅಥವಾ ಹೆಗ್ಗುರುತುಗಳನ್ನು ಸಹ ಬಳಸಬಹುದು.
ನಿಮ್ಮ Uber ಆ್ಯಪ್ನ ಗೌಪ್ಯತೆ ಸೆಟ್ಟಿಂಗ್ಗಳಲ್ಲಿ ಸ್ಥಳ ಸೇವೆಗಳನ್ನು ಬಳಸಬೇಕೇ ಎನ್ನುವುದನ್ನು ನೀವೇ ಆಯ್ಕೆ ಮಾಡಬಹುದು.
ನಿಮ್ಮ ಸ್ಥಳವನ್ನು Uber ಜೊತೆಗೆ ಹಂಚಿಕೊಳ್ಳಲು ನಿಮ್ಮ ಸಾಧನವನ್ನು ಸೆಟಪ್ ಮಾಡಿದ್ದರೆ, ನಿಮ್ಮ ಲೈವ್ ಪಿಕಪ್ ಸ್ಥಳವನ್ನು ನಿಮ್ಮ ಚಾಲಕರೊಂದಿಗೆ ಹಂಚಿಕೊಳ್ಳಲು ಸಹ ನೀವು ಆಯ್ಕೆ ಮಾಡಿಕೊಳ್ಳಬಹುದು. ಲೈವ್ ಸ್ಥಳ ಹಂಚಿಕೆಯನ್ನು ಸಕ್ರಿಯಗೊಳಿಸಿದಾಗ, ನಿಮ್ಮ ಚಾಲಕರು ನಿಮ್ಮ ಪಿಕಪ್ ಸ್ಥಳಕ್ಕೆ ಹತ್ತಿರದಲ್ಲಿದ್ದಾಗ ಮತ್ತು ETA 3 ನಿಮಿಷಗಳಿಗಿಂತ ಕಡಿಮೆ ಇದ್ದಾಗ ಮಾತ್ರ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲಾಗುತ್ತದೆ.
ಈ ವೈಶಿಷ್ಟ್ಯವನ್ನು ಡೀಫಾಲ್ಟ್ ಆಗಿ ಆನ್ ಮಾಡಲಾಗಿದೆ, ಆದರೆ ಪಿಕಪ್ನ ಯಾವುದೇ ಸಮಯದಲ್ಲಿ ಈ ವೈಶಿಷ್ಟ್ಯವನ್ನು ವಿರಾಮಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು ನಿಮಗೆ ಸಾಮರ್ಥ್ಯವಿದೆ. ನಿಮ್ಮ ಸೆಟ್ಟಿಂಗ್ಗಳಲ್ಲಿ ನೀವು ಈ ವೈಶಿಷ್ಟ್ಯವನ್ನು ಆನ್ ಮತ್ತು ಆಫ್ ಸಹ ಮಾಡಬಹುದು.
ನೀವು ನಿಮ್ಮ ಖಾತೆ ಮಾಹಿತಿಯ ಒಂದು ಆನ್ಲೈನ್ ಸಾರಾಂಶವನ್ನು ಅನ್ವೇಷಿಸಬಹುದುಹಾಗೂ ಅದು ಇವುಗಳನ್ನು ಒಳಗೊಂಡಿರಬಹುದು:
ನೀವು ಡೌನ್ಲೋಡ್ ಮಾಡುವುದಕ್ಕಾಗಿ ನಿಮ್ಮ ಡೇಟಾದ ನಕಲನ್ನು ಸಹ ವಿನಂತಿಸಬಹುದು.
ನಿಮ್ಮ Uber ಖಾತೆಯನ್ನು ಅಳಿಸಿದಲ್ಲಿ, Uber ನ ಸಿಸ್ಟಂಗಳಲ್ಲಿರುವ ನಿಮ್ಮ ಮಾಹಿತಿಯನ್ನು ಸಹ ಅಳಿಸಲಾಗುತ್ತದೆ. ಹಾಗಿದ್ದರೂ ಸಹ, ಖಾತೆಯನ್ನು ಅಳಿಸಿದ ನಂತರವೂ ಕಾನೂನಿನ ಅಡಿಯಲ್ಲಿ ಅಗತ್ಯ ಅಥವಾ ಅನುಮತಿ ನೀಡಿದ ಪ್ರಕಾರ Uber ಕೆಲವು ಮಾಹಿತಿಯನ್ನು ಉಳಿಸಿಕೊಳ್ಳಬಹುದು.